ನವದೆಹಲಿ: ಒಬ್ಬ ಮಹಿಳೆ ಸೇರಿ ಭಾರತದ ಇನ್ನೂ ಮೂವರು ರೆಫ್ರಿಗಳು, ವಿಶ್ವ ಫುಟ್ಬಾಲ್ ಫೆಡರೇಷನ್ನ (ಫಿಫಾ) ರೆಫ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಬುಧವಾರ ತಿಳಿಸಿದೆ.

ಗುಜರಾತ್ನ ರಚನಾ ಕುಮಾರಿ ಅವರು ಫಿಫಾದ ಮಹಿಳಾ ರೆಫ್ರಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪುದುಚೇರಿಯ ಅಶ್ವಿನ್ ಕುಮಾರ್ ಮತ್ತು ದೆಹಲಿಯ ಆದಿತ್ಯ ಪುರಕಾಯಸ್ಥ ಅವರೂ ರೆಫ್ರಿಗಳ ಪಟ್ಟಿಗೆ ಸೇರಿದ್ದಾರೆ.

ಕುಮಾರ್ ಮತ್ತು ಪುರಕಾಯಸ್ಥ ಅವರು ಕ್ವಾಲಾಲಂಪುರದಲ್ಲಿ ನಡೆದ ಎಎಫ್ಸಿ ರೆಫ್ರಿ ಅಕಾಡೆಮಿ ಕೋರ್ಸ್ ಪೂರೈಸಿದ್ದಾರೆ. ರಚನಾ ಈಗ ಆ ಕೋರ್ಸ್ನಲ್ಲಿ ಭಾಗಿಯಾಗಿದ್ದಾರೆ ಎಂದು ಫೆಡರೇಷನ್ ತಿಳಿಸಿದೆ.

ಈ ಮೊದಲು ಪುದುಚೇರಿಯ ಮುರಳೀಧರನ್ ಪಾಂಡುರಂಗನ್ ಮತ್ತು ಮಹಾರಾಷ್ಟ್ರದ ಪೀಟರ್ ಕ್ರಿಸ್ಟೋಫರ್ ಅವರು ಫಿಫಾ ಅಸಿಸ್ಟೆಂಟ್ ರೆಫ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.