ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌: ₹ 970 ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ

Last Updated 20 ನವೆಂಬರ್ 2021, 18:19 IST
ಅಕ್ಷರ ಗಾತ್ರ

ನವದೆಹಲಿ: ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಕಂಪನಿಗಳ ₹ 970 ಕೋಟಿ ಮೌಲ್ಯದ ಆಸ್ತಿಗಳನ್ನು ಕೇಂದ್ರ ಸರ್ಕಾರವು ಮಾರಾಟ ಮಾಡಲಿದೆ ಎನ್ನುವ ಮಾಹಿತಿಯುಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ದಾಖಲೆಪತ್ರಗಳಿಂದ ತಿಳಿದುಬಂದಿದೆ.

ಬಿಎಸ್‌ಎನ್‌ಎಲ್‌ಗೆ ಸೇರಿದ ಹೈದರಾಬಾದ್‌, ಚಂಡೀಗಡ, ಭಾವನಗರ ಮತ್ತು ಕೋಲ್ಕತ್ತದಲ್ಲಿನ ₹ 660 ಕೋಟಿ ಮೌಲ್ಯದ ಆಸ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಎಂಟಿಎನ್‌ಎಲ್‌ಗೆ ಸೇರಿದ ಮುಂಬೈನ ವಾಸರಿ ಹಿಲ್‌ ಬಳಿ ಇರುವ ₹ 310 ಕೋಟಿ ಮೌಲ್ಯದ ಆಸ್ತಿಗಳು ಮಾರಾಟಕ್ಕೆ ಇಡಲಾಗಿದೆ. ಡಿಸೆಂಬರ್‌ 14ರಂದು ಎಂಟಿಎನ್‌ಎಲ್‌ ಆಸ್ತಿಗಳ ಇ–ಹರಾಜು ನಡೆಯಲಿದೆ.

‘ಆಸ್ತಿ ನಗದೀಕರಣದ ಮೊದಲ ಹಂತ ಇದಾಗಿದೆ. ಬಿಎಸ್‌ಎನ್‌ಎಲ್‌ನ ₹ 660 ಕೋಟಿ ಮೌಲ್ಯದ ಹಾಗೂ ಎಂಟಿಎನ್‌ಎಲ್‌ನ ₹ 310 ಕೋಟಿ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡಲು ಬಿಡ್ ಆಹ್ವಾನಿಸಲಾಗುವುದು. ಒಂದೂವರೆ ತಿಂಗಳಿನ ಒಳಗಾಗಿ ಎಲ್ಲಾ ಪ್ರಕ್ರಿಯೆಯನ್ನೂ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ’ ಎಂದು ಬಿಎಸ್‌ಎನ್‌ಎಲ್‌ಪಿ.ಕೆ. ಪೂರ್ವರ್‌ ತಿಳಿಸಿದ್ದಾರೆ.

ಈ ಕಂಪನಿಗಳ₹ 69 ಸಾವಿರ ಕೋಟಿ ಮೊತ್ತದ ಪುನಶ್ಚೇತನ ಯೋಜನೆಗೆಕೇಂದ್ರ ಸರ್ಕಾರವು 2019ರ ಅಕ್ಟೋಬರ್‌ನಲ್ಲಿ ಒಪ್ಪಿಗೆ ನೀಡಿತ್ತು. ಇದರ ಭಾಗವಾಗಿ ಈ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಕಂಪನಿಗಳು 2022ರ ಒಳಗಾಗಿ ₹ 37,500 ಕೋಟಿ ಮೌಲ್ಯದ ಆಸ್ತಿಗಳನ್ನು ಗುರುತಿಸಿ ನಗದೀಕರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT