ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತಾಳೆ, ಸೋಯಾ, ಸೂರ್ಯಕಾಂತಿ ಎಣ್ಣೆಗಳ ಕಸ್ಟಮ್ಸ್‌ ಸುಂಕ ರದ್ದು

Last Updated 13 ಅಕ್ಟೋಬರ್ 2021, 15:17 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಮಾರ್ಚ್‌ 31ರವರೆಗೆ ರದ್ದುಗೊಳಿಸಿದೆ. ಜೊತೆಗೆ ಕೃಷಿ ಸೆಸ್‌ ಪ್ರಮಾಣವನ್ನು ಕಡಿಮೆ ಮಾಡಿದೆ.

ಪರಿಷ್ಕೃತ ದರಗಳು ಗುರುವಾರದಿಂದ ಜಾರಿಗೆ ಬರಲಿವೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಪ್ರಕಟಣೆಯಲ್ಲಿ ತಿಳಿಸಿದೆ. ಈ ನಿರ್ಧಾರದಿಂದಾಗಿ ಅಡುಗೆಗೆ ಬಳಸುವ ಈ ಎಣ್ಣೆಗಳ ಬೆಲೆ ಇಳಿಕೆ ಆಗಿ, ಹಬ್ಬದ ಋತುವಿನಲ್ಲಿ ದೇಶಿ ಮಾರುಕಟ್ಟೆಯಲ್ಲಿ ಲಭ್ಯತೆ ಜಾಸ್ತಿ ಆಗುವ ನಿರೀಕ್ಷೆ ಇದೆ.

ಕಚ್ಚಾ ತಾಳೆ ಎಣ್ಣೆಯ ಮೇಲಿನ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ (ಎಐಡಿಸಿ) ಈಗ ಶೇ 7.5ರಷ್ಟಾಗಿದೆ. ಕಚ್ಚಾ ಸೋಯಾ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗಳ ಮೇಲಿನ ಸೆಸ್‌ ತಲಾ ಶೇ 5ರಷ್ಟಾಗಿದೆ. ಈ ಮೊದಲು ಸೆಸ್‌ ಶೇ 20ರಷ್ಟಿತ್ತು.

ಮೂಲ ಕಸ್ಟಮ್ಸ್‌ ಸುಂಕ ಇಳಿಕೆಯಿಂದಾಗಿ ಕಸ್ಟಮ್ಸ್ ಸುಂಕವು ಕಚ್ಚಾ ತಾಳೆ ಎಣ್ಣೆಗೆ ಶೇ 8.25ರಷ್ಟು, ಕಚ್ಚಾ ಸೋಯಾ ಎಣ್ಣೆಗೆ ಶೇ 5.5ರಷ್ಟು ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆಗೆ ಶೇ 5.5ರಷ್ಟಕ್ಕೆ ಇಳಿಕೆ ಆಗಿದೆ. ಈ ಮೊದಲು ಈ ಮೂರರ ಮೇಲಿನ ಕಸ್ಟಮ್ಸ್‌ ಸುಂಕವು ಶೇ 24.75ರಷ್ಟು ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT