ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರೆ ಮಾಡಿದವರ ಹೆಸರು ಮೊಬೈಲ್‌ ಪರದೆ ಮೇಲೆ ಪ್ರದರ್ಶನಕ್ಕೆ ಕ್ರಮ

Published 8 ಆಗಸ್ಟ್ 2024, 15:38 IST
Last Updated 8 ಆಗಸ್ಟ್ 2024, 15:38 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್‌ ಪರದೆ ಮೇಲೆ ಕರೆ ಮಾಡಿದ ವ್ಯಕ್ತಿಯ ಹೆಸರು ತೋರಿಸುವ ಸೇವಾ ವ್ಯವಸ್ಥೆಯ (ಸಿಎನ್‌ಎಪಿ) ಪರೀಕ್ಷೆ ಹಾಗೂ ಅದರ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು, ಗುರುವಾರ ಲೋಕಸಭೆಗೆ ತಿಳಿಸಿದೆ.

ಟೆಲಿಕಾಂ ಕಂಪನಿಗಳು, ತಮ್ಮ ಬಳಕೆದಾರರ ಕಾಲರ್ ಐಡಿ ಸೌಲಭ್ಯ ಅಥವಾ ಕರೆ ಮಾಡುವವರ ನಂಬರ್‌ ಬದಲಿಗೆ, ಅವರ ಹೆಸರು ತೋರಿಸುವ ಪೀಚರ್‌ಗಳನ್ನು ಒದಗಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌)  ಶಿಫಾರಸು ಮಾಡಿದೆ.

‘ಫೆಬ್ರುವರಿ 23ರಂದು ಈ ಶಿಫಾರಸು ಸ್ವೀಕರಿಸಲಾಗಿದೆ’ ಎಂದು ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಅವರು, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT