ನವದೆಹಲಿ: ಕೇಂದ್ರ ಸರ್ಕಾರವು ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತನ್ನ ಸಂಗ್ರಹದ 30 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ ಎಂದು ಮೂಲಗಳು ಹೇಳಿವೆ.
ಈಗ ಗೋಧಿ ಹಿಟ್ಟಿನ ಸರಾಸರಿ ಬೆಲೆಯು ಕೆ.ಜಿ.ಗೆ ₹ 38ಕ್ಕೆ ಏರಿಕೆಯಾಗಿದೆ. 2021ರ ಡಿಸೆಂಬರ್ ಕೊನೆಯ ವೇಳೆಗೆ ಗೋಧಿ ಹಿಟ್ಟಿನ ಬೆಲೆ ₹ 31.74 ಆಗಿತ್ತು.
ಗೋಧಿಯನ್ನು ಕೇಂದ್ರವು ಹಿಟ್ಟಿನ ಗಿರಣಿಗಳಿಗೆ ಹಾಗೂ ವರ್ತಕರಿಗೆ ಮಾರಾಟ ಮಾಡಲಿದೆ. ‘ಗೋಧಿ, ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರವು ಕ್ರಮ ಕೈಗೊಳ್ಳಲಿದೆ’ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಈಚೆಗೆ ಹೇಳಿದ್ದರು. ಬೆಲೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರವು ಗೋಧಿ ರಫ್ತನ್ನು 2022ರ ಮೇ ತಿಂಗಳಲ್ಲಿ ನಿರ್ಬಂಧಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.