ಶನಿವಾರ, ಸೆಪ್ಟೆಂಬರ್ 25, 2021
29 °C

ನವೀಕರಿಸಬಲ್ಲ ಇಂಧನ ವಲಯದಲ್ಲಿ ಹೂಡಿಕೆ: ಅಮೆರಿಕದ ಹೂಡಿಕೆದಾರರಿಗೆ ಭಾರತ ಆಹ್ವಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ನವೀಕರಿಸಬಲ್ಲ ಇಂಧನ ಮತ್ತು ವಿದ್ಯುತ್‌ ವಲಯಗಳಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಕೇಂದ್ರ ಸಚಿವ ಆರ್‌.ಕೆ. ಸಿಂಗ್‌ ಅವರು ಅಮೆರಿಕದ ಹೂಡಿಕೆದಾರರನ್ನು ಆಹ್ವಾನಿಸಿದ್ದಾರೆ.

ಅಮೆರಿಕ–ಭಾರತ ಉದ್ಯಮ ಮಂಡಳಿಯ (ಯುಎಸ್‌ಐಬಿಸಿ) ಸದಸ್ಯರೊಂದಿಗೆ ವರ್ಚುವಲ್‌ ವೇದಿಕೆಯ ಮೂಲಕ ಸಂವಾದ ನಡೆಸಿದ ಅವರು, ನವೀಕರಿಸಬಲ್ಲ ಇಂಧನ ಮತ್ತು ವಿದ್ಯುತ್ ವಲಯಗಳ ಸಾಧನೆಗಳು ಮತ್ತು ಆ ವಲಯಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಅಮೆರಿಕದ ಉದ್ಯಮ ಸಮುದಾಯದೊಂದಿಗೆ ಸಂವಾದ ನಡೆಸಲು ಈ ಸಭೆಯು ಅವಕಾಶ ಕಲ್ಪಿಸಿತು. ಕೇಂದ್ರ ಸಚಿವರು ಈ ವಲಯಗಳಲ್ಲಿ ಬಂಡವಾಳ ತೊಡಗಿಸಲು ಜಾಗತಿಕ ಹೂಡಿಕೆದಾರರಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಸಚಿವಾಲಯದ ಪ್ರಕಟಣೆಯು ತಿಳಿಸಿದೆ.

ಮಾಹಿತಿ ತಂತ್ರಜ್ಞಾನ, ಮೂಲಸೌಕರ್ಯ ಅಭಿವೃದ್ಧಿ, ನವೀಕರಿಸಬಲ್ಲ ಇಂಧನದ ಸಾಧನಗಳು, ಬ್ಯಾಕಿಂಗ್‌, ವಿಮಾನಯಾನ ಸೇರಿದಂತೆ ವಿವಿಧ ವಲಯಗಳ 50ಕ್ಕೂ ಅಧಿಕ ಉದ್ಯಮಗಳ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.

2030ರ ಒಳಗಾಗಿ 450 ಗಿಗಾವಾಟ್‌ಗಳಷ್ಟು ನವೀಕರಿಸಬಲ್ಲ ಇಂಧನ ಉತ್ಪಾದನೆಯ ಗುರಿಯನ್ನು ಸಾಧಿಸುವ ಹಾದಿಯಲ್ಲಿ ಭಾರತವು ಸಾಗುತ್ತಿದೆ. ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಸೋಲಾರ್‌ ಕೋಶಗಳು, ಮಾದರಿಗಳು ಮತ್ತು ಬ್ಯಾಟರಿಗಳ ತಯಾರಿಕೆಗೆ ಉತ್ತೇಜನ ನೀಡಲಾಗಿದೆ ಎಂದು  ಎಂದು ಸಿಂಗ್‌ ಅವರು ಹೂಡಿಕೆದಾರರಿಗೆ ಹೇಳಿರುವುದಾಗಿ ಸಚಿವಾಲಯದ ಪ್ರಕಟಣೆಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು