ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷಗಳ ನಂತರ ದೇಶದಲ್ಲಿ ಪೆಟ್ರೋಲ್‌ಗೆ ಮುಕ್ತಿ: ಗಡ್ಕರಿ

Last Updated 9 ಜುಲೈ 2022, 11:15 IST
ಅಕ್ಷರ ಗಾತ್ರ

ನಾಗ್ಪುರ: ದೇಶದಲ್ಲಿ ಹಸಿರು ಇಂಧನ ಬಳಕೆಗೆ ಉತ್ತೇಜನ ಸಿಗುತ್ತಿದ್ದು, ಐದು ವರ್ಷಗಳ ಬಳಿಕ ದೇಶದಲ್ಲಿ ಪೆಟ್ರೋಲ್ ಬಳಕೆಯೇ ನಿಲ್ಲಲಿದೆ. ಪೆಟ್ರೋಲ್ ಸ್ಥಾನವನ್ನು ಹಸಿರು ಇಂಧನ ತುಂಬಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಹೇಳಿದ್ದಾರೆ.

ಮಹಾರಾಷ್ಟ್ರದ ಅಕೋಲಾದಲ್ಲಿ ಈ ಕುರಿತು ಮಾತನಾಡಿರುವ ಗಡ್ಕರಿ, ಐದು ವರ್ಷಗಳ ಬಳಿಕ ರಾಷ್ಟ್ರದಲ್ಲಿ ಪೆಟ್ರೋಲ್ ನಿಂತು ಹೋಗಲಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ನಿಮ್ಮ ಕಾರುಗಳು-ಸ್ಕೂಟರ್‌ಗಳು ಹಸಿರು ಹೈಡ್ರೋಜನ್, ಎಥಾನಲ್ ಫ್ಲೆಕ್ಸ್ ಇಂಧನ, ಸಿಎನ್‌ಜಿ ಅಥವಾ ಎನ್‌ಎನ್‌ಜಿಯಲ್ಲಿ ಚಲಿಸಲಿವೆ ಎಂದು ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಕೃಷಿ ಬೆಳವಣಿಗೆಯನ್ನು ಶೇಕಡ 12ರಿಂದ 20ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಕೃಷಿ ಸಂಶೋಧಕರು ಹಾಗೂ ತಜ್ಞರಿಗೆ ಗಡ್ಕರಿ ಸಲಹೆ ಮಾಡಿದರು.

ಮಹಾರಾಷ್ಟ್ರದ ರೈತರು ಅತ್ಯಂತ ಪ್ರತಿಭಾವಂತರು. ಅವರಿಗೆ ಹೊಸ ಸಂಶೋಧನೆ ಹಾಗೂ ತಂತ್ರಜ್ಞಾನದೊಂದಿಗೆ ಮಾರ್ಗದರ್ಶನ ನೀಡುವ ಅಗತ್ಯತೆಯ ಬಗ್ಗೆಯೂ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT