ನವದೆಹಲಿ: ವಾಹನ ತಯಾರಿಕಾ ಕಂಪನಿಗಳಾದ ರಾಯಲ್ ಎನ್ಫೀಲ್ಡ್, ಹೀರೊ ಮೋಟೊಕಾರ್ಪ್, ಯಮಹಾ, ಫೋಕ್ಸ್ವ್ಯಾಗನ್ ಹಾಗೂ ಸ್ಕೋಡಾ ಕಂಪನಿಗಳು ವಾಹನಗಳ ಮೇಲಿನ ಜಿಎಸ್ಟಿ ದರ ಇಳಿಕೆಯ ಪರಿಣಾಮವಾಗಿ ತಮ್ಮ ವಾಹನಗಳ ಬೆಲೆ ಕಡಿಮೆ ಆಗಲಿದೆ ಎಂದು ತಿಳಿಸಿವೆ.

ಪರಿಷ್ಕೃತ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಜಿಎಸ್ಟಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದು ಎಂದು ಕಂಪನಿಗಳು ತಿಳಿಸಿವೆ.

ರಾಯಲ್ ಎನ್ಫೀಲ್ಡ್ ತನ್ನ 350 ಸಿ.ಸಿ ಶ್ರೇಣಿಯ ದ್ವಿಚಕ್ರ ವಾಹನದ ಬೆಲೆಯನ್ನು ₹22 ಸಾವಿರದವರೆಗೆ ತಗ್ಗಿಸಿದೆ.

ಹೀರೊ ಮೋಟೊಕಾರ್ಪ್ ತನ್ನ ಆಯ್ದ ಮಾದರಿಯ ದ್ವಿಚಕ್ರ ವಾಹನಗಳ ಬೆಲೆಯನ್ನು ₹15,743ರವರೆಗೆ ತಗ್ಗಿಸಿದೆ. ಇದು ದೆಹಲಿಯ ಷೋರೂಮ್ ದರವಾಗಿದೆ ಎಂದು ತಿಳಿಸಿದೆ.

ಯಮಹಾ ಮೋಟರ್ ತನ್ನ ದ್ವಿಚಕ್ರ ವಾಹನಗಳ ಬೆಲೆಯು ಜಿಎಸ್ಟಿ ದರ ಇಳಿಕೆಯ ಪರಿಣಾಮವಾಗಿ ₹17,581ರವರೆಗೆ ಕಡಿಮೆ ಆಗಲಿದೆ ಎಂದು ತಿಳಿಸಿದೆ.

ಫೋಕ್ಸ್ವ್ಯಾಗನ್ ಇಂಡಿಯಾ ಕಾರುಗಳ ಬೆಲೆಯನ್ನು ₹3.27 ಲಕ್ಷದವರೆಗೆ ಇಳಿಕೆ ಮಾಡಿದೆ. ಎಸ್ಯುವಿ ಟಿಗ್ವಾನ್ ಆರ್–ಲೈನ್ ಬೆಲೆಯನ್ನು ₹3,26,900 ಕಡಿಮೆ ಮಾಡಿದೆ. ಎಸ್ಯುವಿ ಟಿಗ್ವಾನ್ ₹68,400 ಮತ್ತು ಸೆಡಾನ್ ವರ್ಟೂಸ್ ₹66,900 ವರೆಗೆ ತಗ್ಗಿಸಿದೆ.

ಸ್ಕೋಡಾ ಕಂಪನಿಯು ತನ್ನ ವಾಹನಗಳ ಬೆಲೆಯನ್ನು ₹3.3 ಲಕ್ಷದವರೆಗೆ ತಗ್ಗಿಸಿದೆ. ಕೋಡಿಯಾಕ್ ಎಸ್ಯುವಿ ₹3,28,267, ಕೈಲಾಕ್ ₹1,19,295, ಕುಶಾಕ್ ₹65,828 ಮತ್ತು ಸೆಡಾನ್ ಸ್ಲಾವಿಯಾ ದರ ₹63,207 ಕಡಿಮೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.