ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ರದ್ದು | ಐ.ಟಿ ಕಂಪನಿಗಳಿಗೆ₹ 1,200 ಕೋಟಿ ನಷ್ಟ: ಕ್ರಿಸಿಲ್‌

Last Updated 6 ಜುಲೈ 2020, 16:23 IST
ಅಕ್ಷರ ಗಾತ್ರ

ಮುಂಬೈ: ಅಮೆರಿಕೆಯು ಎಚ್‌1–ಬಿ ವೀಸಾವನ್ನು ಈ ವರ್ಷಾಂತ್ಯದವರೆಗೆ ರದ್ದುಪಡಿಸಿರುವುದರಿಂದ ದೇಶಿ ಐ.ಟಿ ಕಂಪನಿಗಳಿಗೆ ₹ 1,200 ಕೋಟಿಯಷ್ಟು ನಷ್ಟದ ಹೊರೆ ಬೀಳಲಿದೆ ಎಂದು ದೇಶಿ ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಅಂದಾಜಿಸಿದೆ.

ದೇಶದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿರುವ ಅಮೆರಿಕೆಯು ಭಾರತದ ತಂತ್ರಜ್ಞರು ಅಮೆರಿಕದಲ್ಲಿ ಕೆಲಸ ಮಾಡಲು ವೀಸಾ ನೀಡುವುದಕ್ಕೆ ಇತ್ತೀಚಿನ ಕೆಲ ವರ್ಷಗಳಿಂದ ಕಡಿವಾಣ ವಿಧಿಸುತ್ತಿದೆ. ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಈ ಕಾರಣಕ್ಕೆ ಭಾರತದ ಐ.ಟಿ ಕಂಪನಿಗಳು ಡಿಜಿಟಲ್‌ ಕೌಶಲದ ಅಮೆರಿಕರನ್ನು ಹೆಚ್ಚಾಗಿ ನೇಮಿಸಿಕೊಳ್ಳುತ್ತಿವೆ. ಹೀಗಾಗಿ ವೀಸಾ ನೀಡಿಕೆ ಮೇಲಿನ ಹೊಸ ನಿರ್ಬಂಧವು ಐ.ಟಿ ಕಂಪನಿಗಳ ಮೇಲೆ ಹೆಚ್ಚಿನ ಹೊರೆ ಹೊರಿಸುವುದಿಲ್ಲ.ಹೊಸ ನಿರ್ಬಂಧವು ಐ.ಟಿ ಕಂಪನಿಗಳ ಲಾಭದ ಮೇಲೆ ಶೇ 0.25 ರಿಂದ ಶೇ 0.30ರಷ್ಟು ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT