ಶುಕ್ರವಾರ, ಸೆಪ್ಟೆಂಬರ್ 24, 2021
23 °C

₹ 5 ಸಾವಿರ ಕೋಟಿ ಒಪ್ಪಂದಕ್ಕೆ ಎಚ್‌ಎಎಲ್‌ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ಕಂಪನಿಯು ಅಮೆರಿಕದ ಜಿಇ ಏವಿಯೇಷನ್ಸ್‌ ಕಂಪನಿಯಿಂದ ‘ಎಫ್‌404–ಜಿಇ–ಐಎನ್‌20’ ಎಂಜಿನ್‌ ಖರೀದಿಗೆ ₹ 5,375 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಈ ಎಂಜಿನ್‌ಗಳನ್ನು ಎಚ್‌ಎಎಲ್‌, ‘ತೇಜಸ್’ ಲಘು ಯುದ್ಧ ವಿಮಾನದಲ್ಲಿ ಬಳಕೆ ಮಾಡಲಿದೆ.

ಬೆಂಗಳೂರಿನಲ್ಲಿರುವ ಎಚ್‌ಎಎಲ್‌ ಕಾರ್ಪೊರೇಟ್ ಕಚೇರಿಯಲ್ಲಿ ಈ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ‘ಲಘು ಯುದ್ಧ ವಿಮಾನಗಳಿಗೆ ಎಚ್‌ಎಎಲ್‌ ಕಡೆಯಿಂದ ನಡೆದಿರುವ ಅತಿದೊಡ್ಡ ಒಪ್ಪಂದ ಇದು’ ಎಂದು ಕಂಪನಿಯ ಸಿಎಂಡಿ ಆರ್‌. ಮಾಧವನ್ ಅವರು ಹೇಳಿದ್ದಾರೆ.

ಭಾರತೀಯ ವಾಯುಪಡೆಗೆ ಒಟ್ಟು 83 ಲಘು ಯುದ್ಧ ವಿಮಾನಗಳನ್ನು ಪೂರೈಸಲು ಎಚ್‌ಎಎಲ್‌ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಎಂಜಿನ್‌ಗಳ ಖರೀದಿಗೆ ಮುಂದಾಗಿರುವುದು ಮಹತ್ವದ್ದು ಎಂದು ಕಂಪನಿ ಹೇಳಿದೆ. ಎಚ್‌ಎಎಲ್‌ ಒಟ್ಟು 99 ಎಂಜಿನ್‌ಗಳನ್ನು ಖರೀದಿಸಲಿದೆ. ಇವು 2029ರೊಳಗೆ ಎಚ್‌ಎಎಲ್‌ಗೆ ಲಭ್ಯವಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು