ನವದೆಹಲಿ: ವಾಟ್ಸ್ಆ್ಯಪ್ ಮೂಲಕ ಎರಡೇ ನಿಮಿಷಗಳಲ್ಲಿ ಗೃಹಸಾಲ ಒದಗಿಸುವ ಹೊಸ ಯೋಜನೆಯೊಂದನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ದೇಶದಲ್ಲಿ ಜಾರಿಗೆ ತಂದಿದೆ.
ಗೃಹ ಸಾಲ ಪಡೆಯುವವರ ಅನುಕೂಲಕ್ಕಾಗಿ ಎಚ್‌ಡಿಎಫ್‌ಸಿ, ‘ಸ್ಪಾಟ್ ಆಫರ್ ಆನ್ ವಾಟ್ಸ್‌ಆ್ಯಪ್‘ ಪರಿಚಯಿಸಿದೆ.
ಸಾಲ ಪಡೆಯಲು ಬಯಸುವವರು, ಎಚ್‌ಡಿಎಫ್‌ಸಿ ವಾಟ್ಸ್‌ಆ್ಯಪ್ ನಂಬರ್ (+91 9867000000)ಗೆ ಮೆಸೇಜ್ ಕಳುಹಿಸಿ, ಅಲ್ಲಿ ಕೊಟ್ಟಿರುವ ಸೂಚನೆಯ ಅನುಸಾರ, ಕೆಲವೊಂದು ವಿವರ ಮತ್ತು ದಾಖಲೆ ನೀಡಿದರೆ ಸಾಕಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ಗ್ರಾಹಕರು ಒದಗಿಸುವ ಮಾಹಿತಿ ಮತ್ತು ದಾಖಲೆ ಪರಿಶೀಲಿಸಿ, ತಕ್ಷಣವೇ ಅವರಿಗೆ ಗೃಹ ಸಾಲ ಮಂಜೂರು ಮಾಡಲಾಗಿರುವ ಪತ್ರವನ್ನು ಎಚ್‌ಡಿಎಫ್‌ಸಿ ವಾಟ್ಸ್‌ಆ್ಯಪ್ ಮೂಲಕವೇ ಕಳುಹಿಸಲಿದೆ.
ಈ ಸೌಲಭ್ಯ 24X7 ಲಭ್ಯವಿದ್ದು, ಗ್ರಾಹಕರು ಗೃಹ ಸಾಲ ಪಡೆಯಲು ಕೆಲವೇ ಸುಲಭ ಹಂತಗಳನ್ನು ಅನುಸರಿಸಿದರೆ ಸಾಕಾಗುತ್ತದೆ. ದೇಶದ ವೇತನಸಹಿತ ಉದ್ಯೋಗಿಗಳಿಗೆ ಈ ಸೌಲಭ್ಯ ದೊರೆಯುತ್ತದೆ ಎಂದು ಎಚ್‌ಡಿಎಫ್‌ಸಿ ಹೇಳಿದೆ.
ಗೃಹ ಸಾಲ ಪಡೆಯಲು ಇರುವ ಆರಂಭಿಕ ಪ್ರಕ್ರಿಯೆ ಮತ್ತು ಮಂಜೂರಾತಿ ಪತ್ರವನ್ನು ಪಡೆಯುವ ಸಮಯವನ್ನು ಇದು ತ್ವರಿತವಾಗಿ ಅನುವು ಮಾಡಿಕೊಡುತ್ತದೆ ಎಂದು ಹೇಳಿಕೆಯಲ್ಲಿ ಎಚ್‌ಡಿಎಫ್‌ಸಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.