ನವದೆಹಲಿ: ಬೋರ್ನ್ ವೀಟಾ ಸೇರಿ ವಿವಿಧ ಪಾನೀಯಗಳನ್ನು ‘ಆರೋಗ್ಯ ಪಾನೀಯ’ಗಳ ಪಟ್ಟಿಯಿಂದ ತೆಗೆದು ಹಾಕುವಂತೆ ಇ–ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರವು ಸೂಚಿಸಿದೆ.

ಆರೋಗ್ಯ ಪಾನೀಯ ಕುರಿತು ಎಫ್‌ಎಸ್‌ಎಸ್ ಕಾಯ್ದೆ 2006ರ ಅಡಿ ವ್ಯಾಖ್ಯಾನಿಸಲಾಗಿದೆ. ಆದರೆ, ಕೆಲವು ಪಾನೀಯಗಳಲ್ಲಿ ಸ್ವೀಕಾರಾರ್ಹ ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸಕ್ಕರೆ ಅಂಶವಿರುವ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ನಡೆಸಿದ ತನಿಖೆಯಲ್ಲಿ ಬಯಲಾಗಿದೆ.

ಹಾಗಾಗಿ, ಅಂತಹ ಪಾನೀಯಗಳನ್ನು ಇ–ಕಾಮರ್ಸ್ ಕಂಪನಿಗಳು ತಮ್ಮ ವೇದಿಕೆಗಳಲ್ಲಿ ಇರುವ ಆರೋಗ್ಯ ಪಾನೀಯಗಳ ವಿಭಾಗದಲ್ಲಿ ಪ್ರದರ್ಶಿಸಬಾರದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆದೇಶ ಹೊರಡಿಸಿದೆ.

ಹಾಲಿನ ಉತ್ಪನ್ನ, ಕಾಳುಗಳು ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ಇ–ಕಾಮರ್ಸ್ ವೇದಿಕೆಗಳಲ್ಲಿ ಆರೋಗ್ಯ ಪಾನೀಯ ಗಳು, ಶಕ್ತಿವರ್ಧಕ ಪೇಯಗಳೆಂದು ಪ್ರದರ್ಶನ ಮಾಡದಂತೆ ಇ–ಕಾಮರ್ಸ್ ಕಂಪನಿಗಳಿಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಇತ್ತೀಚೆಗೆ
ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.