ವಹಿವಾಟು ವಿಸ್ತರಣೆಗೆ ‘ಹೈಕೋಕಿ’ ಕಾರ್ಯತಂತ್ರ

7

ವಹಿವಾಟು ವಿಸ್ತರಣೆಗೆ ‘ಹೈಕೋಕಿ’ ಕಾರ್ಯತಂತ್ರ

Published:
Updated:
Deccan Herald

ಬೆಂಗಳೂರು: ಪವರ್‌ಟೂಲ್ಸ್‌ ತಯಾರಿಸುವ ಹಿಟಾಚಿ ಕೋಕಿ ಕಂಪನಿಯು ತನ್ನ ಬ್ರ್ಯಾಂಡ್‌ ಹೆಸರನ್ನು ‘ಹೈಕೋಕಿ’ ಎಂದು ಬದಲಿಸಿಕೊಂಡಿದ್ದು, ಕಂಪನಿಯ ಎಲ್ಲಾ ಉತ್ಪನ್ನಗಳೂ ಈ ಹೊಸ ಹೆಸರಿನಲ್ಲಿಯೇ ಮಾರುಕಟ್ಟೆಗೆ ಬರಲಿವೆ.

‘ಜಾಗತಿಕ ಹೂಡಿಕೆ ಸಂಸ್ಥೆ ಕೆಕೆಆರ್‌, 2017ರ ಮಾರ್ಚ್‌ನಲ್ಲಿ ಹಿಟಾಚಿ ಕೋಕಿ ಕಂಪನಿಯನ್ನು ಸ್ವಾಧೀನಪಡಿಸಿ
ಕೊಂಡಿತ್ತು. ಆ ಬಳಿಕ ವಹಿವಾಟು ವಿಸ್ತರಣೆ ಮತ್ತು ಸುಸ್ಥಿರ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಬ್ರ್ಯಾಂಡ್‌ ಹೆಸರು ಬದಲಿಸಲಾಗಿದೆ’ ಎಂದು ಕಂಪನಿಯ ಹಿರಿಯ ನಿರ್ದೇಶಕ ಟಕಿಯೊ ತಮಗವೊ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಭಾರತದಲ್ಲಿ ವಹಿವಾಟು ವಿಸ್ತರಣೆಗೆ ಆಕ್ರಮಣಕಾರಿ ಯೋಜನೆಗಳನ್ನು ಹೊಂದಿದ್ದೇವೆ. 2017–18ರಲ್ಲಿ ಹೈಕೋಕಿ ಇಂಡಿಯಾ 3.60 ಲಕ್ಷ ಟೂಲ್ಸ್‌ಗಳನ್ನು ಮಾರಾಟ ಮಾಡಿದ್ದು, 2018–19ರಲ್ಲಿ 4 ಲಕ್ಷ ಟೂಲ್ಸ್‌ಗಳನ್ನು ಮಾರಾಟ ಮಾಡುವ ನಿರೀಕ್ಷೆ ಹೊಂದಿದ್ದೇವೆ’ ಎಂದು ಹಿಟಾಚಿ ಕೋಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೆಶಕ ಮತ್ತು ಕಾರ್ಯದರ್ಶಿ ದತ್ತಾತ್ರೇಯ ಜೋಷಿ ಅವರು ತಿಳಿಸಿದರು.

‘ದೇಶಿ ಬೇಡಿಕೆಯ ಶೇ 50ರಷ್ಟನ್ನು ಬೆಂಗಳೂರಿನ ಪೀಣ್ಯಾದಲ್ಲಿ ಇರುವ ಘಟಕದಲ್ಲಿಯೇ ತಯಾರಿಸಲಾಗುತ್ತಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !