ಶುಕ್ರವಾರ, ಜುಲೈ 30, 2021
28 °C

ಆನ್‌ಲೈನ್‌ ಬುಕಿಂಗ್‌ ಸೌಲಭ್ಯ ಪರಿಚಯಿಸಿದ ಹೋಂಡಾ ಮೋಟರ್‌ಸೈಕಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೋಂಡಾ ಮೋಟರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ (ಎಚ್‌ಎಂಎಸ್‌ಐ), ತನ್ನ ಬೈಕ್‌ ಖರೀದಿದಾರರ ಅನುಕೂಲಕ್ಕಾಗಿ ಕಂಪನಿಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಆನ್‌ಲೈನ್‌ ಬುಕಿಂಗ್‌ ಸೌಲಭ್ಯ ಪರಿಚಯಿಸಿದೆ.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಹೋಂಡಾದ ಬೈಕ್‌ ಖರೀದಿದಾರರು ಮನೆಯಲ್ಲಿ ಕುಳಿತುಕೊಂಡೇ ಸುಲಭವಾಗಿ ತಮ್ಮ ಇಷ್ಟದ ಬಣ್ಣ, ಮಾದರಿಯ ಬೈಕ್‌ಗಳನ್ನು ಮತ್ತು ತಮ್ಮ ಸಮೀಪದ ಅಧಿಕೃತ ಡೀಲರ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

‘ಗ್ರಾಹಕರ ಜತೆ ಸಂಪರ್ಕರಹಿತ ಸಂವಹನ ಹೊಂದಲು ಡಿಜಿಟಲೀಕರಣವು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ’ ಎಂದು ಕಂಪನಿಯ ಮಾರುಕಟ್ಟೆ ನಿರ್ದೇಶಕ ಯದುವಿಂದರ್‌ ಸಿಂಗ್‌ ಗುಲೆರಿಯಾ ಹೇಳಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು