ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಯೋಧರ ಕುಟುಂಬಗಳ ಮನೆ ನಿರ್ಮಾಣ: ಶ್ರೀ ಸಿಮೆಂಟ್‍ನಿಂದ ಉಚಿತ ಸಿಮೆಂಟ್

Last Updated 5 ಡಿಸೆಂಬರ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ಕುಟುಂಬಗಳಿಗೆ ಮನೆಯನ್ನು ಕಟ್ಟಿಕೊಳ್ಳಲು ಉಚಿತವಾಗಿ ಸಿಮೆಂಟ್ ನೀಡುವ ಶ್ರೀ ಸಿಮೆಂಟ್ ಕಂಪನಿಯ ‘ಪ್ರಾಜೆಕ್ಟ್ ನಮನ್’ ಯೋಜನೆಗೆ ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಅಲೋಕ್ ಕ್ಲೇರ್ ಚಾಲನೆ ನೀಡಿದರು.

1971ರ ಬಾಂಗ್ಲಾದೇಶ ಯುದ್ಧದಲ್ಲಿ ಭಾರತೀಯ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ದೇಶಕ್ಕೆ ಜಯ ತಂದು ಕೊಟ್ಟಿದ್ದರು. ಇದರ ಸ್ಮರಣಾರ್ಥ ಪ್ರತಿ ವರ್ಷ ಡಿಸೆಂಬರ್ 16 ರಂದು ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಧರ ಸ್ಮರಣಾರ್ಥ ಅವರ ಕುಟುಂಬಗಳಿಗೆ ನೆರವಾಗಲೆಂದು ಈ ಯೋಜನೆಯನ್ನು ಆರಂಭಿಸಲಾಗಿದೆ.

1999 ರ ಜನವರಿ 1 ರಿಂದ 2019 ರ ಜನವರಿ 1 ರವರೆಗೆ ದೇಶವನ್ನು ಕಾಯುವ ಕಾಯಕದಲ್ಲಿ ಬಲಿದಾನ ಮಾಡಿದ ಯೋಧರ ಕುಟುಂಬಕ್ಕೆ ಅಥವಾ ಅವರ ಹತ್ತಿರದ ಸಂಬಂಧಿಕರಿಗೆ 4000 ಚದರಡಿವರೆಗಿನ ಜಾಗದಲ್ಲಿ ಮನೆಯನ್ನು ಕಟ್ಟಿಕೊಳ್ಳಲು ಸಾಕಾಗುವಷ್ಟು ಸಿಮೆಂಟ್ ಅನ್ನು ಉಚಿತವಾಗಿ ಪೂರೈಸಲಾಗುತ್ತದೆ. ವೀರಯೋಧರ ಕುಟುಂಬ ಸದಸ್ಯರು ದೇಶಾದ್ಯಂತ ಇರುವ ಶ್ರೀ ಸಿಮೆಂಟ್ ತಯಾರಿಕಾ ಕೇಂದ್ರಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಶ್ರೀ ಸಿಮೆಂಟ್‍ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಬಂಗೂರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT