ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿಯಾಗಲಿದೆ ಹೋಂಡಾ ಕಾರ್‌

ಕಸ್ಟಮ್ಸ್‌ ಸುಂಕ, ತಯಾರಿಕಾ ವೆಚ್ಚ ಹೆಚ್ಚಳದ ಪರಿಣಾಮ
Last Updated 10 ಜುಲೈ 2018, 17:51 IST
ಅಕ್ಷರ ಗಾತ್ರ

ನವದೆಹಲಿ: ಸೆಪ್ಟೆಂಬರ್‌ನಿಂದ ಹೋಂಡಾ ಕಾರುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.

ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಕನಿಷ್ಠ ₹ 10 ಸಾವಿರದಿಂದ ಗರಿಷ್ಠ ₹ 35 ಸಾವಿರದವರೆಗೆ ಹೆಚ್ಚಿಸುವುದಾಗಿಹೋಂಡಾ ಕಾರ್ಸ್‌ ಇಂಡಿಯಾ ಕಂಪನಿ ಹೇಳಿದೆ.

‘ತಯಾರಿಕಾ ವೆಚ್ಚ ಹೆಚ್ಚಳ, ಕಸ್ಟಮ್ಸ್‌ ಸುಂಕ ಏರಿಕೆಯಿಂದಾಗಿಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯಲ್‌ ತಿಳಿಸಿದ್ದಾರೆ.

‘ಈಚೆಗೆ ಬಿಡುಗಡೆ ಆಗಿರುವ ಹೊಸ ಅಮೇಜ್‌ನ ಬೆಲೆಯೂ ಆಗಸ್ಟ್‌ನಿಂದ ಬದಲಾಗಲಿದೆ’ ಎಂದೂ ಅವರು ಹೇಳಿದ್ದಾರೆ.

* ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ದೇಶದಲ್ಲಿ ₹ 4.73 ಲಕ್ಷದಿಂದ ₹ 43.21 ಲಕ್ಷದವರೆಗಿನ (ದೆಹಲಿ ಎಕ್ಸ್‌ ಷೋರೂಂ ಬೆಲೆ) ಕಾರುಗಳನ್ನು ಮಾರಾಟ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT