ಶನಿವಾರ, ಮೇ 15, 2021
24 °C

ಹೆಚ್ಚಲಿದೆ ಮನೆ ಬೆಲೆ: ಅನರಾಕ್‌ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಚ್ಚಾ ಸಾಮಗ್ರಿಗಳ ಬೆಲೆ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ದೇಶದ ಏಳು ಪ್ರಮುಖ ನಗರಗಳಲ್ಲಿ 2021ರ ಜನವರಿ–ಮಾರ್ಚ್ ಅವಧಿಯಲ್ಲಿ ಮನೆಗಳ ಬೆಲೆಯು ಶೇಕಡ 1ರಷ್ಟು ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ ಹೇಳಿದೆ.

2021ರ ಜನವರಿ–ಮಾರ್ಚ್ ಅವಧಿಯಲ್ಲಿ ಮನೆಗಳ ಬೆಲೆಯು ಚದರ ಅಡಿಗೆ ₹ 5,660ರಷ್ಟಾಗಿದೆ. 2020ರ ಇದೇ ಅವಧಿಯಲ್ಲಿ ಬೆಲೆಯು ₹ 5,599ರಷ್ಟಿತ್ತು.

ಓದಿ: 

ಬೆಂಗಳೂರಿನಲ್ಲಿ ಮನೆಗಳ ದರವು ಚದರ ಅಡಿಗೆ ಶೇ 2ರಷ್ಟು ಹೆಚ್ಚಾಗಿ ₹ 4,975ರಿಂದ ₹ 5,060ಕ್ಕೆ ಏರಿಕೆಯಾಗಿದೆ. ದೆಹಲಿ–ಎನ್‌ಸಿಆರ್‌ ಮಾರುಕಟ್ಟೆಯಲ್ಲಿ ಮನೆಗಳ ಬೆಲೆಯು ಚದರ ಅಡಿಗೆ ಶೇ 2ರಷ್ಟು ಹೆಚ್ಚಾಗಿ ₹ 4,580 ರಿಂದ ₹ 4,650ಕ್ಕೆ ಏರಿಕೆಯಾಗಿದೆ. ಮುಂಬೈ ಮಹಾನಗರ ಪ್ರದೇಶದಲ್ಲಿ ಶೇ 1ರಷ್ಟು ಹೆಚ್ಚಾಗಿ ₹ 10,610ರಿಂದ ₹ 10,750ಕ್ಕೆ ಏರಿಕೆ ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು