ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯೂಸ್‌ನಿಂದ ಎಚ್‌ಟಿಎಸ್‌ ಬ್ರಾಡ್‌ಬ್ಯಾಂಡ್‌ ಸೇವೆ

Last Updated 13 ಸೆಪ್ಟೆಂಬರ್ 2022, 7:03 IST
ಅಕ್ಷರ ಗಾತ್ರ

ನವದೆಹಲಿ: ಹ್ಯೂಸ್‌ ಕಮ್ಯುನಿಕೇಷನ್ಸ್‌ ಇಂಡಿಯಾ (ಎಚ್‌ಸಿಐ) ಸಂಸ್ಥೆಯು ಭಾರತದ ಮೊದಲ ಹೈ ಥ್ರೋಪುಟ್‌ ಸ್ಯಾಟಲೈಟ್‌ (ಎಚ್‌ಟಿಎಸ್‌) ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆ ಒದಗಿಸಲಿದ್ದು, ಇದಕ್ಕೆ ಸೋಮವಾರ ಚಾಲನೆ ನೀಡಿದೆ.

‘ಇಸ್ರೊದ ಜಿ ಸ್ಯಾಟ್‌–11 ಮತ್ತು ಜಿ ಸ್ಯಾಟ್‌–29 ಸಂವಹನ ಉಪಗ್ರಹಗಳ ನೆರವಿನಿಂದ ದೇಶದಾದ್ಯಂತ ಅತಿ ವೇಗದ ಇಂಟರ್‌ನೆಟ್‌ ಸೇವೆಯನ್ನು ಒದಗಿಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

‘ನೂತನ ಬ್ರಾಂಡ್‌ಬ್ಯಾಂಡ್‌ ಸೇವೆಯು ಸಂಪರ್ಕದ ಅಂತರವನ್ನು ಪರಿಹರಿಸುತ್ತದೆ. ನೆಟ್‌ವರ್ಕ್‌ನ ಕಾರ್ಯಕ್ಷಮತೆ ಹೆಚ್ಚಿಸಲಿದೆ. ಸರ್ಕಾರಿ ಸಂಸ್ಥೆಗಳು, ಹಣಕಾಸು ಕಂಪನಿಗಳು, ಗಣಿ ಮತ್ತು ಇಂಧನ ಕಂಪನಿಗಳ ಹೈ ಬ್ಯಾಂಡ್‌ವಿಡ್ತ್‌ ಅವಶ್ಯಕತೆಯನ್ನು ಪೂರೈಸಲಿದೆ’ ಎಂದು ಎಚ್‌ಸಿಐ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಾರ್ಥೊ ಬ್ಯಾನರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT