ಸೋಮವಾರ, ನವೆಂಬರ್ 18, 2019
25 °C

ನಾನು ಎಡಪಂಥೀಯ: ನೊಬೆಲ್ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಹೇಳಿಕೆ

Published:
Updated:

ನವದೆಹಲಿ: ‘ಸಮಾನತೆಯಲ್ಲಿ ಗಾಢವಾದ ನಂಬಿಕೆ ಇರಿಸಿದ್ದೇನೆ, ಹೀಗಾಗಿ ನಾನು ಎಡಪಂಥೀಯ’ ಎಂದು ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದಿರುವ ಭಾರತೀಯ ಸಂಜಾತ ಅಭಿಜಿತ್‌ ಬ್ಯಾನರ್ಜಿ ಅವರು ಹೇಳಿಕೊಂಡಿದ್ದಾರೆ.

ಪತ್ರಕರ್ತ ಶೇಖರ್‌ ಗುಪ್ತಾ ಅವರು  ಸೋಮವಾರ ಇಲ್ಲಿ ನಡೆಸಿಕೊಟ್ಟ ‘ಆಫ್‌ ದ ಕಫ್‌’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ನಾನೊಬ್ಬ ಕಲ್ಯಾಣಪರ ಎಡಪಂಥೀಯ’ ಎಂದೂ ಅವರು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಬಲಪಂಥೀಯ ಸರ್ಕಾರವು ಇತ್ತೀಚೆಗೆ ಕಾರ್ಪೊರೇಟ್‌ ಸಂಸ್ಥೆಗಳಿಗೆ ನೀಡಿದ ದೊಡ್ಡ ಮೊತ್ತದ ತೆರಿಗೆ ಕಡಿತದಿಂದ ಕುಂಠಿತಗೊಂಡಿರುವ ಆರ್ಥಿಕತೆಯು ತಕ್ಷಣಕ್ಕೆ ಚೇತರಿಕೆಯ ಹಾದಿಗೆ ಮರಳುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)