ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಬಿಎಂ, ನಾಸ್ಕಾಂ ಸಹಭಾಗಿತ್ವದಉದ್ಯೋಗ ಕೌಶಲ ಕಾರ್ಯಕ್ರಮ

Last Updated 6 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮತ್ತು ಹರಿಯಾಣದ ವಿವಿಧ ಕಾಲೇಜುಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಾಸ್ಕಾಂ ಪ್ರತಿಷ್ಠಾನ ಮತ್ತು ತಂತ್ರಜ್ಞಾನ ದಿಗ್ಗಜ ಸಂಸ್ಥೆ ಐಬಿಎಂ ಉದ್ಯೋಗ ಕೌಶಲ ತರಬೇತಿ ಕಾರ್ಯಕ್ರಮ ಆರಂಭಿಸಿವೆ.

ಈ ಕಾರ್ಯಕ್ರಮದ ಸೌಲಭ್ಯ ಪಡೆದುಕೊಳ್ಳಲಿದ್ದಾರೆ.ಡೇಟಾ ಸೈನ್ಸ್, ಕ್ಲೌಡ್ ಕಂಪ್ಯೂಟಿಂಗ್, ಬ್ಲಾಕ್ ಚೈನ್, ಹೊಸ ತಂತ್ರಜ್ಞಾನ, ಇಂಗ್ಲಿಷ್ ಭಾಷಾ ಕೌಶಲದ ಬಗ್ಗೆ 2500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ದ್ವಿತೀಯ ಹಂತ ಮತ್ತು ತೃತೀಯ ಹಂತದ ನಗರಗಳಲ್ಲಿರುವ ತಂತ್ರಜ್ಞಾನೇತರ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ರಾಜ್ಯದ ವಿಜಯಾ ಸಂಜೆ ಕಾಲೇಜು, ಈಸ್ಟ್‌ ಪಾಯಿಂಟ್ ಕಾಲೇಜು, ವಿದ್ಯಾ ವಾಹಿನಿ ಕಾಲೇಜು, ವಿವೇಕಾನಂದ ಪದವಿ ಕಾಲೇಜು, ಧಾರವಾಡ ಕರ್ನಾಟಕ ಕಾಲೇಜು, ಸಿದ್ದಗಂಗಾ ಕಾಲೇಜು, ಸಿದ್ದಗಂಗಾ ಮಹಿಳಾ ಕಾಲೇಜುಗಳ ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ತರಬೇತಿ ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಭರವಸೆಯನ್ನೂ ಈ ಸಂಸ್ಥೆಗಳು ನೀಡಿವೆ.

‘ಡೇಟಾ ಸೈನ್ಸ್, ಕ್ಲೌಡ್ ಕಂಪ್ಯೂಟಿಂಗ್, ಬ್ಲಾಕ್ ಚೈನ್‌ನಂತಹ ವಿಷಯಗಳ ಬಗ್ಗೆ ಇದೇ ಮೊದಲ ಬಾರಿಗೆ ಸಾಮಾಜಿಕ ಹೊಣೆಗಾರಿಕಾ ಸೇವೆಯಡಿ ಕೌಶಲ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ನಾಸ್ಕಾಂ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶೋಕ್ ಪಾಮಿಡಿ ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT