ನವದೆಹಲಿ: 2024–25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ₹11,792 ಕೋಟಿ ನಿವ್ವಳ ಲಾಭಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹10,272 ಕೋಟಿ ಲಾಭ ಗಳಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 15ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹42,792 ಕೋಟಿ ವರಮಾನ ಗಳಿಸಲಾಗಿತ್ತು. ಈ ಬಾರಿ ₹48,368 ಕೋಟಿ ಸಂಗ್ರಹವಾಗಿದೆ. ಬಡ್ಡಿ ವರಮಾನ ₹41,300 ಕೋಟಿ ಆಗಿದೆ ಎಂದು ಹೇಳಿದೆ.

ವಸೂಲಾಗದ ಸರಾಸರಿ ಸಾಲದ ಪ್ರಮಾಣವು ಶೇ 2.3ರಿಂದ ಶೇ 1.96ಕ್ಕೆ ತಗ್ಗಿದೆ. ನಿವ್ವಳ ಎನ್ಪಿಎ ಶೇ 0.44ರಿಂದ ಶೇ 0.42ಕ್ಕೆ ಇಳಿಕೆಯಾಗಿದೆ. ಸಮರ್ಪಕ ಬಂಡವಾಳ ಅನುಪಾತವು (ಸಿಎಆರ್) ಶೇ 14.61ರಿಂದ ಶೇ 14.71ಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.