ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ದೇಶದ ಕೈಗಾರಿಕಾ ಉತ್ಪಾದನೆ

Published 12 ಮಾರ್ಚ್ 2024, 14:01 IST
Last Updated 12 ಮಾರ್ಚ್ 2024, 14:01 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇ 3.8ರಷ್ಟು ಕಡಿಮೆ ದಾಖಲಾಗಿದೆ.

ತಯಾರಿಕೆ, ಗಣಿ ಮತ್ತು ಇಂಧನ ವಲಯದ ಬೆಳವಣಿಗೆಯು ಇಳಿಕೆ ಆಗಿರುವುದು ಕೈಗಾರಿಕಾ ವಲಯದ ಒಟ್ಟಾರೆ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವರದಿ ತಿಳಿಸಿದೆ.  

ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಈ ಬೆಳವಣಿಗೆಯು 2023ರ ಜನವರಿಯಲ್ಲಿ ಶೇ 5.8ರಷ್ಟು ದಾಖಲಾಗಿತ್ತು. ಅದೇ ವರ್ಷದ ನವೆಂಬರ್‌ನಲ್ಲಿ ಶೇ 2.4ರಷ್ಟು ಹಾಗೂ ಡಿಸೆಂಬರ್‌ನಲ್ಲಿ ಶೇ 4.2ರಷ್ಟಿತ್ತು. 

2023–24ನೇ ಹಣಕಾಸು ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ ಕೈಗಾರಿಕಾ ಉತ್ಪಾದನೆಯು ಶೇ 5.9ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಶೇ 5.5ರಷ್ಟು ಬೆಳವಣಿಗೆ ಕಂಡಿತ್ತು.

ಕಳೆದ ವರ್ಷದ ಜನವರಿಯಲ್ಲಿ ಶೇ 4.5ರಷ್ಟಿದ್ದ ತಯಾರಿಕಾ ವಲಯದ ಬೆಳವಣಿಗೆಯು ಈ ಜನವರಿಯಲ್ಲಿ ಶೇ 3.2ರಷ್ಟು ಇಳಿಕೆಯಾಗಿದೆ. ಇಂಧನ ಉತ್ಪಾದನೆಯು ಶೇ 12.7ರಿಂದ ಶೇ 5.6ಕ್ಕೆ ಇಳಿಕೆ ಕಂಡಿದೆ.

ಗಣಿ ಉತ್ಪಾದನೆಯು ಶೇ 9ರಿಂದ ಶೇ 5.9ಕ್ಕೆ ತಗ್ಗಿದೆ. ಬಂಡವಾಳ ಸರಕುಗಳ ಉತ್ಪಾದನೆಯು ಶೇ 10.5ರಿಂದ ಶೇ 4.1ಕ್ಕೆ ಇಳಿದಿದೆ. ಆದರೆ, ಗ್ರಾಹಕರ ಬಳಕೆಯ ವಸ್ತುಗಳ ಉತ್ಪಾದನೆಯು ಶೇ 8.2ರಿಂದ ಶೇ 10.9ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT