ಮಂಗಳವಾರ, ಆಗಸ್ಟ್ 9, 2022
20 °C

ಸ್ವೀಡನ್ ಮೂಲದ ಐಕಿಯಾ ಬೆಂಗಳೂರಿನ ಮಾರುಕಟ್ಟೆ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೀಠೋಪಕರಣಗಳ ಮಾರಾಟ ಕಂಪನಿ, ಸ್ವೀಡನ್ ಮೂಲದ ಐಕಿಯಾ ಬೆಂಗಳೂರಿನ ಮಾರುಕಟ್ಟೆಯನ್ನು ಗುರುವಾರ ಪ್ರವೇಶಿಸಿದೆ. ಆರಂಭಿಕ ಹಂತದಲ್ಲಿ ಕಂಪನಿಯು ಆನ್‌ಲೈನ್‌ ಮಾರುಕಟ್ಟೆಯ ಮೂಲಕ ಗ್ರಾಹಕರಿಗೆ ಪೀಠೋಪಕರಣಗಳ ಮಾರಾಟ ಮಾಡಲಿದೆ.

ಕಂಪನಿಯು 2018ರಲ್ಲಿ ಹೈದರಾಬಾದ್‌ನಲ್ಲಿ ಬೃಹತ್‌ ಮಳಿಗೆ ಆರಂಭಿಸಿತ್ತು. 2020ರ ಡಿಸೆಂಬರ್‌ನಲ್ಲಿ ಮುಂಬೈಯಲ್ಲಿ ಎರಡನೇ ಮಳಿಗೆ ತೆರೆದಿತ್ತು. ಈಚೆಗೆ ಗುಜರಾತ್‌ನಲ್ಲಿ ಆನ್‌ಲೈನ್‌ ಮೂಲಕ ಪೀಠೋಪಕರಣಗಳ ಮಾರಾಟ ಆರಂಭಿಸಿದೆ.

‘ಐಕಿಯಾ ಆನ್‌ಲೈನ್‌ ಮಳಿಗೆಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಪೀಠೋಪಕರಣಗಳು ಲಭ್ಯವಿವೆ. ಬೆಂಗಳೂರಿನ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ರೀತಿಯಲ್ಲಿ ಉತ್ಪನ್ನಗಳು ಇರಲಿವೆ’ ಎಂದು ಪ್ರಕಟಣೆ ತಿಳಿಸಿದೆ.

ಐಕಿಯಾ ಕಂಪನಿಯ ಭಾರತದ ವ್ಯವಹಾರಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪೀಟರ್‌ ಬೆತ್ಸೆಲ್‌ ಅವರು, ‘ಕಂಪನಿಯು ಒಂದು ವರ್ಷದೊಳಗೆ ಬೆಂಗಳೂರಿನ ನಾಗಸಂದ್ರದಲ್ಲಿ ಸುಮಾರು ನಾಲ್ಕು ಲಕ್ಷ ಚದರ ಅಡಿಗಳಷ್ಟು ವಿಶಾಲವಾಗಿರುವ ಬೃಹತ್‌ ಮಳಿಗೆಯನ್ನು ತೆರೆಯಲಿದೆ. ಈ ಮಳಿಗೆಯು ನಾಗಸಂದ್ರ ಮೆಟ್ರೊ ರೈಲು ನಿಲ್ದಾಣದೊಂದಿಗೆ ಸಂಪರ್ಕ ಹೊಂದಿರಲಿದೆ. ನಂತರದಲ್ಲಿ, ಇನ್ನಷ್ಟು ಗ್ರಾಹಕರನ್ನು ತಲುಪಲು ನಗರದ ಮಧ್ಯಭಾಗದಲ್ಲಿಯೂ ನಾವು ಮಳಿಗೆ ಆರಂಭಿಸಲಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು