ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳಸಾಗಣೆ : ಆರ್ಥಿಕತೆಗೆ₹ 3.35 ಲಕ್ಷ ಕೋಟಿ ನಷ್ಟ

Last Updated 26 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಐದು ಪ್ರಮುಖ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಮೂರು ವರ್ಷಗಳಲ್ಲಿ ನಡೆದ ಕಳ್ಳಸಾಗಣೆಯಿಂದ ದೇಶಿ ಆರ್ಥಿಕತೆಗೆ ₹ 3.35 ಲಕ್ಷ ಕೋಟಿಗಳಷ್ಟು ನಷ್ಟ ಉಂಟಾಗಿದೆ.

2016 ರಿಂದ 2018ರವರೆಗೆ ಜವಳಿ, ಸಿಗರೇಟ್‌, ಎಲೆಕ್ಟ್ರಾನಿಕ್ಸ್‌, ಸಿದ್ಧ ಉಡುಪು ಮತ್ತು ಭಾರಿ ಯಂತ್ರೋಪಕರಣಗಳ ಕಳ್ಳಸಾಗಣೆಯಿಂದ 48 ಲಕ್ಷದಷ್ಟು ಉದ್ಯೋಗ ನಷ್ಟವೂ ಆಗಿದೆ.

ಯಂತ್ರೋಪಕರಣ ಮತ್ತು ಬಿಡಿಭಾಗಗಳ ಕಳ್ಳಸಾಗಣೆಯಿಂದಷ್ಟೇ ₹ 1.53 ಲಕ್ಷ ಕೋಟಿಗಳಷ್ಟು ಭಾರಿ ಮೊತ್ತದ ನಷ್ಟ ಉಂಟಾಗಿರುವುದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಭಾರಿ ಯಂತ್ರೋಪಕರಣಗಳನ್ನು ದೇಶೀಯವಾಗಿ ತಯಾರಿಸಿದ್ದರೆ ಅದರಿಂದ 19 ಲಕ್ಷ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಂಬಾಕು ಮತ್ತು ಅದರ ಉತ್ಪನ್ನಗಳ ಕಳ್ಳಸಾಗಣೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ವಲಯದಲ್ಲಿ ಸರ್ಕಾರಕ್ಕೆ ಬರಬೇಕಾಗಿದ್ದ ವರಮಾನದಲ್ಲಿ ₹ 44 ಸಾವಿರ ಕೋಟಿಗಳಷ್ಟು ಕೊರತೆ ಬಿದ್ದಿದೆ.

‘ಕಾನೂನು ಬಾಹಿರ ಆಮದಿನಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದ ತೆರಿಗೆ ವರಮಾನದಲ್ಲಿ ₹ 39 ಸಾವಿರ ಕೋಟಿ ಖೋತಾ ಬಿದ್ದಿದೆ’ ಎಂದು ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿಯ ಮಾಜಿ ಮುಖ್ಯಸ್ಥ ಪಿ. ಸಿ. ಝಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಳ್ಳಸಾಗಣೆ, ನಕಲಿ ಉತ್ಪನ್ನ ಮತ್ತು ಕದ್ದ ಸರಕುಗಳ ಮಾರಾಟವು ಜಾಗತಿಕ ಸಮಸ್ಯೆಯಾಗಿದೆ. ಕೆಲ ವರ್ಷಗಳಿಂದ ಇಂತಹ ಅಕ್ರಮಗಳು ಹೆಚ್ಚುತ್ತಲೇ ಇವೆ. ವಿಶ್ವ ವ್ಯಾಪಾರದಲ್ಲಿ ಇಂತಹ ಅಕ್ರಮಗಳ ಪಾಲು ಶೇ 3.3 ರಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT