ಶುಕ್ರವಾರ, ಸೆಪ್ಟೆಂಬರ್ 25, 2020
28 °C

ಸೌಂದರ್ಯವರ್ಧನೆಗೆ ‘ಇನಾತುರ್‌’

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಸೌಂ ದರ್ಯವರ್ಧನೆ ಮತ್ತು ಸುಗಂಧಭರಿತ ಚಿಕಿತ್ಸೆಯಲ್ಲಿ (ಅರೋಮಾಥೆರಪಿ) ಇಂಗ್ಲೆಂಡ್‌ ಮತ್ತು ಕೆನಡಾದಲ್ಲಿ ಅಧ್ಯಯನ ಮಾಡಿರುವ ಸೌಂದರ್ಯ ತಜ್ಞೆ ಪೂಜಾ ನಾಗ್ದೇವ್‌ ಅವರು, ‘ಇನಾತುರ್‌’ (inatur) ಬ್ರ್ಯಾಂಡ್‌ ಹೆಸರಿನಡಿ ತಯಾರಿಸಿ ಮಾರಾಟ ಮಾಡುತ್ತಿರುವ ಚರ್ಮ ಮತ್ತು ಕೇಶ ಸಂರಕ್ಷಣೆಯ ನೈಸರ್ಗಿ ಉತ್ಪನ್ನಗಳು ನಗರದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ‘ನಗರದ ವಿವಿಧ ಭಾಗಗಳಲ್ಲಿನ ಗ್ರಾಹಕರು, ಮಂತ್ರಿಮಾಲ್‌ ಮತ್ತು ಗರುಡಾ ಮಾಲ್‌ನಲ್ಲಿ ಇರುವ ‘ಇನಾತುರ್‌’ ಮಳಿಗೆಗಳನ್ನು ಹುಡುಕಿಕೊಂಡು ಬರುತ್ತಾರೆ. ಮುಖದ ಅಂದ ಹೆಚ್ಚಿಸುವ, ಕೇಶರಾಶಿಯ ಆರೋಗ್ಯ ರಕ್ಷಿಸುವ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ’ ಎಂದು ಪೂಜಾ ಹೇಳುತ್ತಾರೆ.

ಅರೋಮಾ ಥೆರಪಿಯಲ್ಲಿ ತರಬೇತಿ ಪಡೆದಿರುವ ಇವರು, 2007ರಲ್ಲಿ ‘ಇನಾತುರ್‌’ ಬ್ರ್ಯಾಂಡ್‌ನಡಿ ಸಣ್ಣ ಪ್ರಮಾಣದಲ್ಲಿ  ಕ್ರೀಂ, ಲೋಷನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದರು. ದೆಹಲಿಯಲ್ಲಿ ಆರಂಭಿಸಿದ್ದ ಮೊದಲ ಮಳಿಗೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದರಿಂದ ಉತ್ತೇಜನಗೊಂಡು ಬೆಂಗಳೂರಿನಲ್ಲಿ ಮಳಿಗೆಗಳನ್ನು ಆರಂಭಿಸಿದ್ದರು. ಗ್ರಾಹಕರ ಬೇಡಿಕೆ ಮತ್ತು ಉದ್ದಿಮೆಯಲ್ಲಿನ ಅನುಭವದ ನೆರವಿನಿಂದ ಈ ಬ್ರ್ಯಾಂಡ್‌ನಡಿ ಈಗ 200ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಉತ್ಪನ್ನಗಳನ್ನು ಪರಿಚಯಿಸಿದ್ದಾರೆ. ಪೂಜಾ ನಾಗ್ದೇವ್‌ ಅವರ ಕುಟುಂಬವು ಬೆಂಗಳೂರಿನಲ್ಲಿ ಅಗರಬತ್ತಿ ತಯಾರಿಕೆಯ ಕಾರ್ಖಾನೆ ಹೊಂದಿದೆ. ಇಲ್ಲಿ ತಯಾರಾಗುವ ‘ಹರಿದರ್ಶನ’ ಬ್ರ್ಯಾಂಡ್‌ನ ಅಗರಬತ್ತಿಗಳು ಉತ್ತರ ಭಾರತದಲ್ಲಿ ಜನಪ್ರಿಯವಾಗಿವೆ.

ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದ ವಿಶಿಷ್ಟ ಗಿಡಮೂಲಿಕೆಗಳನ್ನು ಬಳಸಿಕೊಂಡು ಲಾಭದಾಯಕ ಉದ್ದಿಮೆ ನಡೆಸುತ್ತಿದ್ದರಿಂದ ಪ್ರೇರಣೆಗೊಂಡ ಪೂಜಾ ಈ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದಾರೆ. ವಿದೇಶಿ ಸಂಸ್ಥೆಗಳಿಗಿಂತ ಭಿನ್ನವಾಗಿ ಈ ಉತ್ಪನ್ನಗಳನ್ನು ತಯಾರಿಸಿ ದೇಶ– ವಿದೇಶಗಳಲ್ಲಿ ವಹಿವಾಟು ವಿಸ್ತರಿಸಿದ್ದಾರೆ.

‘ನೈಸರ್ಗಿಕ ಉತ್ಪನ್ನಗಳ ವಿಭಾಗದಲ್ಲಿ ‘ಇನಾತುರ್‌’ ಬ್ಯೂಟಿ ಬ್ರ್ಯಾಂಡ್‌ ಪ್ರಶಸ್ತಿಗೆ ಭಾಜನವಾಗಿದೆ. ಪಂಚತಾರಾ ಹೋಟೆಲ್‌, ಸ್ಪಾಗಳಲ್ಲಿ ಈ ಉತ್ಪನ್ನಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಚರ್ಮ ಸಂರಕ್ಷಣೆಯ ನೈಸರ್ಗಿಕ ಉತ್ಪನ್ನಗಳಿಗೆ ಬೆಂಗಳೂರಿನಲ್ಲಿ ಉತ್ತಮ ಬೇಡಿಕೆಯೂ ಇದೆ.

‘ಬಹುತೇಕ ಸೌಂದರ್ಯವರ್ಧಕ ಉತ್ಪನ್ನಗಳ ಹೊರಭಾಗದಲ್ಲಿ, ತಯಾರಿಕೆಗೆ ಬಳಸಿದ ಕಚ್ಚಾ ಸರಕಿನ ಉಲ್ಲೇಖವೇ ಇರುವುದಿಲ್ಲ. ‘ಇನಾತುರ್‌’ ಉತ್ಪನ್ನಗಳು ಇದಕ್ಕೆ ಭಿನ್ನವಾಗಿವೆ. ಕಚ್ಚಾ ಸರಕಿನ ಉತ್ಪನ್ನಗಳ ವಿವರ ನೀಡುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬರುತ್ತಿದೆ.

‘ಈ ಉತ್ಪನ್ನಗಳನ್ನು ಗೃಹ ಕೈಗಾರಿಕೆಯಲ್ಲಿ ತಯಾರಿಸಲಾಗುವುದು. ಚರ್ಮ ಮತ್ತು ಕೇಶದ ಆರೈಕೆಯ ಅತ್ಯುತ್ತಮ ಫಲಿತಾಂಶ ಪಡೆಯಲು ನೈಸರ್ಗಿಕ ಉಪ ಉತ್ಪನ್ನಗಳನ್ನು ವೈಜ್ಞಾನಿಕ ವಿಧಾನದಲ್ಲಿ ಮಿಶ್ರಣ ಮಾಡಲಾಗುವುದು. ಆಯುರ್ವೇದ ಮಸಾಜ್‌ಗೆ ಬಳಕೆಯಾಗುವ ತೈಲಗಳಿವೆ. 50 ಗ್ರಾಂ, 100 ಗ್ರಾಂಗಳಲ್ಲೂ ಲಭ್ಯ ಇವೆ. ನಿಸರ್ಗದಲ್ಲಿ ಲಭ್ಯ ಇರುವ ಗಿಡಮೂಲಿಕೆಗಳನ್ನು ನೈಸರ್ಗಿಕ ವಿಧಾನದಲ್ಲಿ ಸಂಸ್ಕರಿಸಿ ಈ ಉತ್ಪನ್ನಗಳನ್ನು ತಯಾರಿಸಲಾಗಿದೆ. ದುಬಾರಿ ಬೆಲೆ ಇರದ ಸರಕು ಇದಾಗಿದೆ’ ಎಂದು ಹೇಳುತ್ತಾರೆ.

ನಿಸರ್ಗದ ಸೌಂದರ್ಯವನ್ನು ಸಾಧ್ಯವಿರುವ ವಿಧಾನಗಳಲ್ಲಿ ಗ್ರಾಹಕರಿಗೆ ಪರಿಚಯಿಸುವುದೇ ‘ಇನಾತುರ್‌’ನ ಧ್ಯೇಯವಾಗಿದೆ. ನಿಸರ್ಗ ಮತ್ತು ವಿಜ್ಞಾನ ಮೇಳೈಸಿ ಈ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಅಂತರ್ಜಾಲ ತಾಣ inatur.inನಲ್ಲಿಯೂ ಸರಕುಗಳನ್ನು ಖರೀದಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು