ನವದೆಹಲಿ: ಜಾಗತಿಕ ರೇಟಿಂಗ್ಸ್ ಸಂಸ್ಥೆ ಎಸ್ ಆ್ಯಂಡ್ ಪಿ ಭಾರತದ ರೇಟಿಂಗ್ಅನ್ನು 18 ವರ್ಷಗಳ ನಂತರ ಮೇಲ್ದರ್ಜೆಗೆ ಏರಿಸಿದೆ. ಸಂಸ್ಥೆಯು ಭಾರತಕ್ಕೆ ‘ಬಿಬಿಬಿ’ ರೇಟಿಂಗ್ ನೀಡಿದೆ.

ಭಾರತದ ಆರ್ಥಿಕ ಬೆಳವಣಿಗೆ, ಸರ್ಕಾರದ ಸಾಲಗಳನ್ನು ಹಾಗೂ ಬಜೆಟ್ ಕೊರತೆಯನ್ನು ತಗ್ಗಿಸುವಲ್ಲಿ ರಾಜಕೀಯ ನಾಯಕತ್ವವು ಹೊಂದಿರುವ ಬದ್ಧತೆ, ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಲು ಪೂರಕವಾಗಿರುವ ಹಣಕಾಸಿನ ನೀತಿಯನ್ನು ಉಲ್ಲೇಖಿಸಿ ಎಸ್ ಆ್ಯಂಡ್ ಪಿ ಸಂಸ್ಥೆಯು ದೇಶದ ಆರ್ಥಿಕ ಮುನ್ನೋಟವು ಸ್ಥಿರವಾಗಿದೆ ಎಂದು ಹೇಳಿದೆ.

‘ಜಗತ್ತಿನಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿ ಭಾರತದ ಅರ್ಥ ವ್ಯವಸ್ಥೆಯೂ ಒಂದಾಗಿದೆ... ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಸರ್ಕಾರಿ ವೆಚ್ಚಗಳ ಗುಣಮಟ್ಟವು ಸುಧಾರಿಸಿದೆ’ ಎಂದು ಎಸ್ ಆ್ಯಂಡ್ ಪಿ ಹೇಳಿದೆ.

ಅಮೆರಿಕವು ಭಾರತದ ಸರಕುಗಳ ಆಮದಿನ ಮೇಲೆ ವಿಧಿಸಿರುವ ಸುಂಕದ ಪರಿಣಾಮವು ‘ನಿಭಾಯಿಸಬಹುದಾದ’ ಮಟ್ಟದಲ್ಲಿ ಇದೆ ಎಂದು ಕೂಡ ಅದು ಹೇಳಿದೆ. ‘ಭಾರತವು ಬಾಹ್ಯ ವ್ಯಾಪಾರದ ಮೇಲೆ ಹೆಚ್ಚಿನ ಅವಲಂಬನೆ ಹೊಂದಿಲ್ಲ, ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಶೇಕಡ 60ರಷ್ಟು ಕೊಡುಗೆಯು ಆಂತರಿಕ ಬೇಡಿಕೆಗಳಿಂದ ಬರುತ್ತದೆ’ ಎಂದು ಅದು ಉಲ್ಲೇಖಿಸಿದೆ.

ರೇಟಿಂಗ್ ಮೇಲ್ದರ್ಜೆಗೆ ಏರಿಕೆ ಆಗಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು ಹರ್ಷ ವ್ಯಕ್ತಪಡಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿಯಲ್ಲಿ ಭಾರತದ ಅರ್ಥ ವ್ಯವಸ್ಥೆಯು ನಿಜವಾಗಿಯೂ ಲವಲವಿಕೆ ಹೊಂದಿರುವುದನ್ನು, ಸದಾ ಚಟುವಟಿಕೆಯಿಂದ ಕೂಡಿರುವುದನ್ನು, ಗಟ್ಟಿಯಾಗಿ ಇರುವುದನ್ನು ಇದು ದೃಢಪಡಿಸಿದೆ’ ಎಂದು ಹೇಳಿದೆ.

ಸರ್ಕಾರದ ಸಾಲವನ್ನು ಹಾಗೂ ಬಜೆಟ್ ಕೊರತೆಯನ್ನು ಕಡಿಮೆ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಮೂಲಸೌಕರ್ಯ ಸೃಷ್ಟಿಗಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗಾಗಿ ಕೈಗೊಂಡಿರುವ ಕಾರ್ಯಗಳನ್ನು ಮುಂದುವರಿಸಲಾಗಿದೆ. ಈ ಕಾರಣಗಳಿಂದಾಗಿ ರೇಟಿಂಗ್ ಮೇಲ್ದರ್ಜೆಗೆ ಏರಿಕೆ ಆಗಿದೆ ಎಂದು ಸಚಿವಾಲಯವು ಹೇಳಿದೆ.

ಭಾರತದ ಅರ್ಥ ವ್ಯವಸ್ಥೆಯು ನಿರ್ಜೀವವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ ಕೆಲವೇ ದಿನಗಳ ನಂತರದಲ್ಲಿ, ಅಮೆರಿಕ ಮೂಲದ ಸಂಸ್ಥೆಯಿಂದ ಭಾರತದ ರೇಟಿಂಗ್ ಹೆಚ್ಚಳ ಆಗಿದೆ. ಎಸ್ ಆ್ಯಂಡ್ ಪಿ ಸಂಸ್ಥೆಯು 2007ರಲ್ಲಿ ಭಾರತಕ್ಕೆ ‘ಬಿಬಿಬಿ–’ ರೇಟಿಂಗ್ ನೀಡಿತ್ತು. ಈ ವರ್ಷದ ಆರಂಭದಲ್ಲಿ ಮಾರ್ನಿಂಗ್ಸ್ಟಾರ್ ಡಿಬಿಆರ್ಎಸ್ ರೇಟಿಂಗ್ ಸಂಸ್ಥೆಯು ಭಾರತದ ರೇಟಿಂಗ್ಅನ್ನು ಮೇಲ್ದರ್ಜೆಗೆ ಏರಿಸಿತ್ತು.

‘ಭಾರತದ ಅರ್ಥ ವ್ಯವಸ್ಥೆಯು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ತಲುಪಿದ್ದ ಕೆಳಮಟ್ಟದಿಂದ ನಂತರದ ದಿನಗಳಲ್ಲಿ ಚೇತರಿಕೆ ಕಂಡುಕೊಂಡ ಕಾರಣ, ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥವ್ಯವಸ್ಥೆಗಳ ಪೈಕಿ ಅತ್ಯುತ್ತಮ ಅರ್ಥವ್ಯವಸ್ಥೆ ಆಗಿದೆ... ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 6.5ರಷ್ಟು ಇರಲಿದೆ, ಮುಂದಿನ ಮೂರು ವರ್ಷಗಳಲ್ಲಿ ಅದು ಸರಾಸರಿ ಶೇ 6.8ರಷ್ಟು ಇರಲಿದೆ ಎಂಬುದು ನಮ್ಮ ಅಂದಾಜು’ ಎಂದು ಸಂಸ್ಥೆಯು ಹೇಳಿದೆ.

ರೇಟಿಂಗ್ ಬಗ್ಗೆ ಒಂದಿಷ್ಟು ವಿವರ

ಅಮೆರಿಕ ಮೂಲದ ಎಸ್ ಆ್ಯಂಡ್ ಪಿ ಸಂಸ್ಥೆಯು ವಿವಿಧ ದೇಶಗಳಿಗೆ ಅಲ್ಲಿನ ಆರ್ಥಿಕ ಸ್ಥಿತಿಗತಿ ಆಧರಿಸಿ ರೇಟಿಂಗ್ ನೀಡುತ್ತದೆ. ಸಂಸ್ಥೆಯು ಈಗ ಭಾರತದ ನೀಡಿರುವುದು ‘ಹೂಡಿಕೆ ದರ್ಜೆಯ ರೇಟಿಂಗ್’. ಸಂಸ್ಥೆಯು ಈಗ ನೀಡಿರುವ ‘ಬಿಬಿಬಿ’ ರೇಟಿಂಗ್ ಅರ್ಥ ‘ದೇಶವು ತನ್ನ ಹಣಕಾಸಿನ ಹೊಣೆಗಳನ್ನು ನಿಭಾಯಿಸಲು ಬೇಕಿರುವ ಸಾಮರ್ಥ್ಯ ಹೊಂದಿದೆ. ಆದರೆ ಅರ್ಥ ವ್ಯವಸ್ಥೆಯಲ್ಲಿ ನಕಾರಾತ್ಮಕ ಬೆಳವಣಿಗೆಗಳು ಆದಲ್ಲಿ ಸಮಸ್ಯೆ ಎದುರಾಗುತ್ತದೆ’ ಎಂದಾಗಿದೆ. ಈ ಹಿಂದೆ ದೇಶಕ್ಕೆ ನೀಡಿದ್ದ ‘ಬಿಬಿಬಿ–’ ರೇಟಿಂಗ್ ‘ಹೂಡಿಕೆ ದರ್ಜೆ’ಯಲ್ಲಿ ಅತ್ಯಂತ ಕಡಿಮೆ ಮಟ್ಟದ್ದಾಗಿತ್ತು. ಈಗಿನ ರೇಟಿಂಗ್ ಪರಿಷ್ಕರಣೆಯ ಪರಿಣಾಮ?: ಈಗ ರೇಟಿಂಗ್ ಮೇಲ್ದರ್ಜೆಗೆ ಏರಿಕೆ ಆಗಿರುವ ಪರಿಣಾಮವಾಗಿ ಭಾರತದ ಕಂಪನಿಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಕಡಿಮೆ ವೆಚ್ಚಕ್ಕೆ ಸಾಲ ಪಡೆಯಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.