ಗುರುವಾರ , ಆಗಸ್ಟ್ 22, 2019
26 °C

ವಿಶ್ವದ ಅತಿದೊಡ್ಡ ಆರ್ಥಿಕತೆಯ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದ ಭಾರತ

Published:
Updated:

ನವದೆಹಲಿ: ಭಾರತವು ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೆ ಎರವಾಗಿದ್ದು, ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶ್ರೇಯಾಂಕದಲ್ಲಿ ಒಂದು ಸ್ಥಾನ ಕೆಳಗೆ ಇಳಿದಿದೆ.

‘ಜಿಡಿಪಿ’ ಆಧರಿಸಿ ವಿಶ್ವಬ್ಯಾಂಕ್‌ ಪಟ್ಟಿ ಮಾಡಿರುವ 205 ದೇಶಗಳ ಶ್ರೇಯಾಂಕದಲ್ಲಿ ಭಾರತ ತನ್ನ 6ನೇ ಸ್ಥಾನವನ್ನು ಫ್ರಾನ್ಸ್‌ಗೆ ಬಿಟ್ಟುಕೊಟ್ಟಿದೆ.

2018ರಲ್ಲಿ ಭಾರತದ ‘ಜಿಡಿಪಿ’ಯು ₹ 190 ಲಕ್ಷ ಕೋಟಿಗಳಷ್ಟಿದೆ ಎಂದು ವಿಶ್ವಬ್ಯಾಂಕ್‌ ಲೆಕ್ಕ ಹಾಕಿದೆ. ಇದು ಫ್ರಾನ್ಸ್‌ನ ₹ 193.9 ಲಕ್ಷ ಕೋಟಿಗಿಂತ ಕಡಿಮೆ ಇದೆ. 2017ರಲ್ಲಿ ಭಾರತವು ಫ್ರಾನ್ಸ್‌ ಹಿಂದಿಕ್ಕಿತ್ತು. ಅಮೆರಿಕ, ಚೀನಾ ಮತ್ತು ಜಪಾನ್‌ ಮೊದಲ ಮೂರು ಸ್ಥಾನಗಳಲ್ಲಿವೆ. ₹ 350 ಲಕ್ಷ ಕೋಟಿ ಮೊತ್ತದ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವಾಗಲೇ ವಿಶ್ವಬ್ಯಾಂಕ್‌ ವರದಿ ಪ್ರಕಟಗೊಂಡಿದೆ.

Post Comments (+)