ನವದೆಹಲಿ: ‘2014ರಲ್ಲಿ ಜಗತ್ತಿನ 10ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತವು ಸದ್ಯ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಲ್ಲಿದೆ. ಈ ಮಟ್ಟದ ಬೆಳವಣಿಗೆ ಕಾಣಲು ಜಿಎಸ್ಟಿಯಂತಹ ಸುಧಾರಣೆಗಳು ಮತ್ತು ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ನೀಡಿರುವ ಅಭೂತಪೂರ್ವ ಉತ್ತೇಜನ ಮುಖ್ಯವಾಗಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಾವಧಿಯ ಕುರಿತು ಬ್ರೋಕಿಂಗ್ ಸಂಸ್ಥೆ ಬ್ರೈನ್ಸ್ಟೈನ್ ಸಿದ್ಧಪಡಿಸಿರುವ ವರದಿ ಹೇಳಿದೆ.

‘ದಿ ಡಿಕೇಡ್ ಅಂಡರ್ ಪಿಎಂ ಮೋದಿ–ಅ ಡೀಪ್–ಡೈವ್’ ಶೀರ್ಷಿಕೆಯ 31 ಪುಟಗಳ ವರದಿಯಲ್ಲಿ ಸರ್ಕಾರದ ಸುಧಾರಣಾ ಕ್ರಮಗಳು, ಹಣದುಬ್ಬರ ನಿಯಂತ್ರಣ, ವಿತ್ತೀಯ ಒಳಗೊಳ್ಳುವಿಕೆ ಹಾಗೂ ಡಿಜಿಟಲೀರಕಣದ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

2014ರಿಂದ ಜಿಡಿಪಿಯ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್) ಶೇ 5.7ರಷ್ಟು ಇದೆ. ಕೋವಿಡ್ಗೂ ಮುಂಚಿನ ಬೆಳವಣಿಗೆಯು ಶೇ 6.7ರಷ್ಟು ಆಗಿದೆ. ಆದರೆ, ಯುಪಿಎ ಅವಧಿಯಲ್ಲಿನ ಶೇ 7.6ಕ್ಕಿಂತ ಕಡಿಮೆ ಇದೆ ಎಂದು ವರದಿ ತಿಳಿಸಿದೆ.

ಜಿಡಿಪಿ ಬೆಳವಣಿಗೆಯಲ್ಲಿ ಭಾರತವು ಸದ್ಯ ಜಾಗತಿಕವಾಗಿ ಐದನೇ ಸ್ಥಾನದಲ್ಲಿ ಇದ್ದರೂ ತಲಾ ಆದಾಯದ ದೃಷ್ಟಿಯಿಂದ ಸದ್ಯ 127ನೇ ಸ್ಥಾನದಲ್ಲಿ ಇದೆ. 2014ರಲ್ಲಿ ದೇಶವು 147ನೇ ಸ್ಥಾನದಲ್ಲಿ ಇತ್ತು.

ಕೆಲವು ವಿಷಯಗಳಲ್ಲಿ ಸುಧಾರಣೆಯ ಅಗತ್ಯ ಇದೆ ಎಂದು ವರದಿ ತಿಳಿಸಿದೆ. ಮಾನವ ಅಭಿವೃದ್ಧಿ ಸೂಚ್ಯಂಕವು (ಎಚ್ಡಿಐ) 2016ರಿಂದ ಈಚೆಗೆ ಇಳಿಕೆ ಕಾಣುತ್ತಲೇ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.