ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಲ್ತಿ ಖಾತೆ ಮಿಗತೆ ₹47,570 ಕೋಟಿ: ಭಾರತೀಯ ರಿಸರ್ವ್‌ ಬ್ಯಾಂಕ್‌

Published 24 ಜೂನ್ 2024, 16:00 IST
Last Updated 24 ಜೂನ್ 2024, 16:00 IST
ಅಕ್ಷರ ಗಾತ್ರ

ಮುಂಬೈ: ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ಚಾಲ್ತಿ ಖಾತೆ ಮಿಗತೆಯು ₹47,570 ಕೋಟಿ ಆಗಿದೆ. ಇದು ದೇಶದ ಜಿಡಿಪಿಯ ಗಾತ್ರದ ಶೇ 0.6ರಷ್ಟಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೋಮವಾರ ತಿಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಚಾಲ್ತಿ ಖಾತೆ ಕೊರತೆ ₹10,849 ಕೋಟಿ ಮತ್ತು ಡಿಸೆಂಬರ್‌ ತ್ರೈಮಾಸಿಕದಲ್ಲಿ ₹72,602 ಕೋಟಿ ದಾಖಲಾಗಿತ್ತು. ಸೇವೆಗಳ ರಫ್ತು ಹೆಚ್ಚಳ ಆಗಿದೆ ಮತ್ತು ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರು ದೇಶಕ್ಕೆ ಕಳುಹಿಸಿದ ಹಣದ ಮೊತ್ತದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.

2023–24ರ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ ₹1.93 ಲಕ್ಷ ಕೋಟಿ ಆಗಿದೆ. ಇದರ ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹5.59 ಲಕ್ಷ ಕೋಟಿ ಇತ್ತು.

ಜನವರಿ-ಮಾರ್ಚ್‌ನಲ್ಲಿ ಸರಕುಗಳ ವ್ಯಾಪಾರ ಕೊರತೆಯು ₹4.2 ಲಕ್ಷ ಕೋಟಿ, ನಿವ್ವಳ ಸೇವೆಗಳ ಸ್ವೀಕೃತಿ ₹3.56 ಲಕ್ಷ ಕೋಟಿಯಾಗಿದೆ ಎಂದು ಆರ್‌ಬಿಐನ ಅಂಕಿ–ಅಂಶಗಳು ತಿಳಿಸಿವೆ.

ವಿದೇಶದಲ್ಲಿ ಉದ್ಯೋಗದಲ್ಲಿರುವ ಭಾರತೀಯರು ತಾಯ್ನಾಡಿಗೆ ಕಳುಹಿಸಿದ ಹಣವು ಮಾರ್ಚ್ ತ್ರೈಮಾಸಿಕದಲ್ಲಿ ₹2.66 ಲಕ್ಷ ಕೋಟಿ (ಶೇ 11.9ರಷ್ಟು ಏರಿಕೆ) ಆಗಿದೆ. ಅನಿವಾಸಿ ಠೇವಣಿಗಳು ₹45,053 ಕೋಟಿ, ನಿವ್ವಳ ವಿದೇಶಿ ನೇರ ಹೂಡಿಕೆಯ ಹರಿವು ₹16,686 ಕೋಟಿಯಾಗಿದೆ. ಭಾರತಕ್ಕೆ ಬಾಹ್ಯ ವಾಣಿಜ್ಯ ಸಾಲಗಳ ನಿವ್ವಳ ಒಳಹರಿವು ₹21,692 ಕೋಟಿ ದಾಖಲಾಗಿದೆ ಎಂದು ಆರ್‌ಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT