ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Morgan Stanley Report | ದಶಕಕ್ಕೂ ಕಡಿಮೆ ಅವಧಿಯಲ್ಲಿ ಸುಧಾರಣೆ ಕಂಡ ಭಾರತ

Published 31 ಮೇ 2023, 14:03 IST
Last Updated 31 ಮೇ 2023, 14:03 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಪರಿವರ್ತನೆ ಕಂಡಿದೆ, ಜಾಗತಿಕ ಅರ್ಥ ವ್ಯವಸ್ಥೆ ಹಾಗೂ ಏಷ್ಯಾದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಾರ್ಗನ್‌ ಸ್ಟ್ಯಾನ್ಲಿ ವರದಿ ಹೇಳಿದೆ.

ಭಾರತವು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆಳವಣಿಗೆ ಸಾಧಿಸಿಲ್ಲ ಹಾಗೂ ದೇಶದ ಷೇರು ಮಾರುಕಟ್ಟೆಗಳ ಬಂಡವಾಳ ಮೌಲ್ಯವು ಬಹಳ ದುಬಾರಿಯಾಗಿದೆ ಎಂಬ ಟೀಕೆಗಳನ್ನು ಅಲ್ಲಗಳೆದಿರುವ ಮಾರ್ಗನ್‌ ಸ್ಟ್ಯಾನ್ಲಿ, ಇಂತಹ ಮಾತುಗಳು ದೇಶದಲ್ಲಿ ಒಂಬತ್ತು ವರ್ಷಗಳಲ್ಲಿ ಆಗಿರುವ ಸುಧಾರಣೆಗಳನ್ನು ಅಲಕ್ಷಿಸುತ್ತಿವೆ ಎಂದು ಹೇಳಿದೆ.

ಮೋದಿ ಅವರು ಪ್ರಧಾನಿಯಾದ ನಂತರದಲ್ಲಿ ಆಗಿರುವ 10 ದೊಡ್ಡ ಬದಲಾವಣೆಗಳನ್ನು ವರದಿಯು ಪಟ್ಟಿ ಮಾಡಿದೆ. ಕಾರ್ಪೊರೇಟ್ ತೆರಿಗೆ ಪ್ರಮಾಣವನ್ನು ಇತರ ಸಮಾನ ದೇಶಗಳಿಗೆ ಅನುಗುಣವಾಗಿ ಹೊಂದಿಸಿರುವುದು, ಮೂಲಸೌಕರ್ಯಕ್ಕೆ ಹೂಡಿಕೆ ಹೆಚ್ಚುತ್ತಿರುವುದು ಪ್ರಮುಖ ಸುಧಾರಣೆಗಳಲ್ಲಿ ಸೇರಿದೆ ಎಂದು ಹೇಳಿದೆ.

ಜಿಎಸ್‌ಟಿ ಸಂಗ್ರಹ ಏರಿಕೆ, ಸಬ್ಸಿಡಿ ಮೊತ್ತವನ್ನು ಅರ್ಹರ ಖಾತೆಗಳಿಗೆ ವರ್ಗಾಯಿಸುವುದು, ದಿವಾಳಿ ಸಂಹಿತೆಯ ಜಾರಿ, ಎಫ್‌ಡಿಐ ಮೇಲೆ ಗಮನ, ಹಣದುಬ್ಬರ ನಿಯಂತ್ರಣಕ್ಕೆ ಹೊಂದಾಣಿಕೆಯ ನೀತಿ, ಕಾರ್ಪೊರೇಟ್ ಲಾಭಕ್ಕೆ ಸರ್ಕಾರದ ಬೆಂಬಲ, ರಿಯಲ್ ಎಸ್ಟೇಟ್ ವಲಯಕ್ಕೆ ಹೊಸ ಕಾನೂನು... ಇವೆಲ್ಲ ಗಮನಾರ್ಹ ಬದಲಾವಣೆಗಳು ಎಂದು ವರದಿ ಹೇಳಿದೆ.

ಇವೆಲ್ಲವುಗಳ ಕಾರಣದಿಂದಾಗಿ ಕಾರ್ಪೊರೇಟ್ ಹಾಗೂ ಷೇರು ಮಾರುಕಟ್ಟೆ ಹೂಡಿಕೆದಾರರ ಲಾಭವು ಹೆಚ್ಚಾಗಿದೆ ಎಂದು ಈ ಬ್ರೋಕರೇಜ್ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT