ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದ ಫಿಚ್ ರೇಟಿಂಗ್ಸ್‌

Published 16 ಆಗಸ್ಟ್ 2023, 16:14 IST
Last Updated 16 ಆಗಸ್ಟ್ 2023, 16:14 IST
ಅಕ್ಷರ ಗಾತ್ರ

ನವದೆಹಲಿ: 'ಕೋವಿಡ್‌ ಸಾಂಕ್ರಾಮಿಕದಿಂದಾಗಿ ಎದುರಾಗಿದ್ದ ಆರ್ಥಿಕ ಅಪಾಯಗಳು ಕಡಿಮೆ ಆಗಿರುವ ಕಾರಣ, ಭಾರತದ ಬ್ಯಾಂಕ್‌ಗಳ ಕಾರ್ಯಾಚರಣೆ ಸ್ಥಿತಿಯು ಉತ್ತಮಗೊಂಡಿದೆ’ ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಹೇಳಿದೆ.

ಕೋವಿಡ್‌ಗೂ ಮೊದಲಿನ ಸ್ಥಿತಿಗೆ ಹೋಲಿಸಿದರೆ, ಬ್ಯಾಂಕಿಂಗ್ ವಲಯದ ಆರೋಗ್ಯವನ್ನು ಹೇಳುವ ಹಲವು ಸೂಚ್ಯಂಕಗಳು ಸುಧಾರಣೆ ಕಂಡಿವೆ ಎಂದು ಅದು ಹೇಳಿದೆ. ‘ದೇಶದ ಅರ್ಥ ವ್ಯವಸ್ಥೆಯ ಗಾತ್ರವು ಬೃಹತ್ ಆಗಿರುವುದು ಹಾಗೂ ಇಲ್ಲಿನ ಜನಸಂಖ್ಯೆಯು ಬ್ಯಾಂಕ್‌ಗಳ ಪಾಲಿಗೆ ಲಾಭದಾಯಕ ವಹಿವಾಟನ್ನು ನಡೆಸಲು, ವರಮಾನ ಮೂಲವನ್ನು ವಿಸ್ತರಿಸಿಕೊಳ್ಳಲು ಅವಕಾಶಗಳನ್ನು ಒದಗಿಸುವಂತಿವೆ’ ಎಂದು ಫಿಚ್ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕವು ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಿತು. ಆದರೆ ಈಗ ಅದಕ್ಕೆ ಸಂಬಂಧಿಸಿದ ಅಪಾಯಗಳು ತಗ್ಗಿವೆ ಎಂದು ಫಿಚ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT