ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಅವಧಿಗೆ ‘ವಿಶ್ವದ 2ನೇ ಸಿರಿವಂತ’ ಸ್ಥಾನಕ್ಕೆ ಏರಿದ್ದ ಗೌತಮ್‌ ಅದಾನಿ

Last Updated 16 ಸೆಪ್ಟೆಂಬರ್ 2022, 12:28 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ಗೌತಮ್ ಅದಾನಿ ಅವರು ಕಿರು ಅವಧಿಗೆ ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.

ಫೋಬ್ಸ್‌ ನಿಯತಕಾಲಿಕೆಯ ಪ್ರಕಾರ, ಅದಾನಿ ಅವರ ಸಂಪತ್ತು ಕಿರು ಅವಧಿಗೆ ₹ 31,880 ಕೋಟಿಯಷ್ಟು ಹೆಚ್ಚಾಗಿ ₹12,27,380 ಕೋಟಿಗೆ ಏರಿಕೆ ಕಂಡಿತ್ತು. ಇದರಿಂದಾಗಿ ಎಲ್‌ವಿಎಂಎಚ್‌ನ ಬರ್ನಾರ್ಡ್ ಅರ್ನಾಲ್ಟ್ ಮತ್ತು ಅಮೆಜಾನ್‌ನ ಜೆಫ್ ಬೆಜಾಸ್ ಅವರಿಗಿಂತಲೂ ಮೇಲಿನ ಸ್ಥಾನವನ್ನು ಅದಾನಿ ಪಡೆದುಕೊಂಡಿದ್ದರು.

ಟೆಸ್ಲಾ ಕಂಪನಿಯ ಸ್ಥಾಪಕ ಇಲಾನ್ ಮಸ್ಕ್‌ ಅವರು ಒಟ್ಟು ₹ 21,51,900 ಕೋಟಿ ಮೌಲ್ಯದ ಸಂಪತ್ತು ಹೊಂದುವ ಮೂಲಕ ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ಅದಾನಿ ಒಡೆತನದ ಕಂಪನಿಗಳ ಷೇರು ಮೌಲ್ಯದಲ್ಲಿ ಏರಿಕೆ ಆಗಿದ್ದರಿಂದ ಅವರ ಒಟ್ಟು ಸಂಪತ್ತು ಮೌಲ್ಯದಲ್ಲಿ ಹೆಚ್ಚಳ ಕಂಡುಬಂದು ಎರಡನೇ ಸ್ಥಾನಕ್ಕೆ ಏರಿದ್ದರು.

ಅದಾನಿ ಅವರು ಶೇಕಡ 75ರಷ್ಟು ಪಾಲು ಹೊಂದಿರುವ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು 2020ರ ಮಾರ್ಚ್‌ನಿಂದ ಈಚೆಗೆ ಶೇ 2,700ಕ್ಕೂ ಹೆಚ್ಚು ಏರಿಕೆ ಕಂಡಿದೆ. ಮೌಲ್ಯದ ಲೆಕ್ಕದಲ್ಲಿ ಕಳೆದ ಆರು ತಿಂಗಳಿನಲ್ಲಿ ಎರಡುಪಟ್ಟು ಹೆಚ್ಚಾಗಿದೆ.

ಮಾರುಕಟ್ಟೆ ವಿಶ್ಲೇಷಕರ ಅಂದಾಜಿನ ಪ್ರಕಾರ, ಅದಾನಿ ಒಡೆತನದ, ಷೇರುಪೇಟೆಯಲ್ಲಿ ನೋಂದಾಯಿತ ಏಳು ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ ಟಾಟಾ ಸಮೂಹದ ಕಂಪನಿಗಳ ಬಂಡವಾಳ ಮೌಲ್ಯವನ್ನು ಕಿರು ಅವಧಿಗೆ ಹಿಂದಿಕ್ಕಿತ್ತು. ಇದರಿಂದಾಗಿ ಅದಾನಿ ಸಮೂಹವು ಸಣ್ಣ ಅವಧಿಗೆ ಭಾರತದ ಅತಿದೊಡ್ಡ ಸಮೂಹ ಸಂಸ್ಥೆಯಾಗಿ ಹೊರಹೊಮ್ಮಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT