ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಆಫ್‌ ಬರೋಡ ಲಾಭ ಶೇ 28ರಷ್ಟು ಹೆಚ್ಚಳ

Published 4 ನವೆಂಬರ್ 2023, 11:23 IST
Last Updated 4 ನವೆಂಬರ್ 2023, 11:23 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ಬ್ಯಾಂಕ್‌ ಆಫ್‌ ಬರೋಡದ (ಬಿಒಬಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 28ರಷ್ಟು ಹೆಚ್ಚಾಗಿ ₹4,253 ಕೋಟಿಗೆ ತಲುಪಿದೆ.

ಸುಸ್ತಿ ಸಾಲದ ಪ್ರಮಾಣ ಇಳಿಕೆ ಕಂಡಿರುವುದು ಮತ್ತು ಬಡ್ಡಿ ವರಮಾನ ಹೆಚ್ಚಾಗಿರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ತಿಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹3,313 ಕೋಟಿಯಷ್ಟು ಇತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.  

ಎಲ್‌ಎಸ್‌ಇಜಿ ಸಂಸ್ಥೆಯ ಮಾಹಿತಿ ಪ್ರಕಾರ, ಲಾಭವು ₹4 ಸಾವಿರ ಕೋಟಿಯಷ್ಟು ಆಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜು ಮಾಡಿದ್ದರು. ಆದರೆ, ಅದಕ್ಕಿಂತಲೂ ಹೆಚ್ಚಿನ ಲಾಭ ಆಗಿದೆ.

ನಿವ್ವಳ ಬಡ್ಡಿ ವರಮಾನವು ₹21,254 ಕೋಟಿಯಿಂದ ₹27,862 ಕೋಟಿಗೆ ಏರಿಕೆ ಆಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿ) ಶೇ 5.31 ರಿಂದ ಶೇ 3.32ಕ್ಕೆ ಇಳಿಕೆ ಕಂಡಿದೆ. ನಿವ್ವಳ ಎನ್‌ಪಿಎ ಶೇ 1.16ರಿಂದ ಶೇ 0.76ಕ್ಕೆ ತಗ್ಗಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹1,627 ಕೋಟಿಯಿಂದ ₹2,161 ಕೋಟಿಗೆ ಏರಿಕೆ ಕಂಡಿದೆ. ನಿವ್ವಳ ಬಡ್ಡಿ ಗಳಿಕೆಯು ಶೇ 3.33ರಷ್ಟು ಹೆಚ್ಚಾಗಿದೆ. ಬಂಡವಾಳ ಲಭ್ಯತೆ ಪ್ರಮಾಣವು ಶೇ 15.25 ರಿಂದ ಶೇ 15.30ಕ್ಕೆ ಏರಿಕೆ ಕಂಡಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT