ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಕಲ್ಲಿದ್ದಲು ಆಮದು ಪ್ರಮಾಣ ಸೆಪ್ಟೆಂಬರ್‌ನಲ್ಲಿ ಶೇ 4.3ರಷ್ಟು ಏರಿಕೆ

Published 13 ನವೆಂಬರ್ 2023, 14:44 IST
Last Updated 13 ನವೆಂಬರ್ 2023, 14:44 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಆಮದು ಪ್ರಮಾಣ ಸೆಪ್ಟೆಂಬರ್‌ನಲ್ಲಿ ಶೇ 4.3ರಷ್ಟು ಏರಿಕೆಯಾಗಿ 2.61 ಕೋಟಿ ಟನ್‌ಗೆ ತಲುಪಿದೆ.

ಹಿಂದಿನ ಇದೇ ಅವಧಿಯಲ್ಲಿ 1.97 ಕೋಟಿ ಟನ್‌ ಆಮದಾಗಿತ್ತು ಎಂದು ಇ–ವಾಣಿಜ್ಯ ಸಂಸ್ಥೆ ಎಂ-ಜಂಕ್ಷನ್‌ ಸರ್ವಿಸ್‌ ಲಿಮಿಟೆಡ್‌ ಅಂಕಿ ಅಂಶ ತಿಳಿಸಿದೆ.

ಕೋಕಿಂಗ್‌ ಅಲ್ಲದ ಕಲ್ಲಿದ್ದಲು ಆಮದು ಈ ಸೆಪ್ಟೆಂಬರ್‌ನಲ್ಲಿ 1.38 ಕೋಟಿ ಟನ್‌ ಇದ್ದರೆ, ಹಿಂದಿನ ಇದೇ ಅವಧಿಯಲ್ಲಿ 1.2 ಕೋಟಿ ಟನ್‌ ಇತ್ತು. ಕೋಕಿಂಗ್‌ ಕಲ್ಲಿದ್ದಲು ಆಮದು 48 ಲಕ್ಷ ಟನ್‌ನಿಂದ 45 ಲಕ್ಷ ಟನ್‌ಗೆ ಇಳಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಗೆ ಹೋಲಿಸಿದರೆ ಕಲ್ಲಿದ್ದಲು ಆಮದು ಹಿಂದಿನ ವರ್ಷದ 1.35 ಕೋಟಿ ಟನ್‌ನಿಂದ 1.24 ಕೋಟಿ ಟನ್‌ಗೆ ಇಳಿಕೆಯಾಗಿದೆ. 

2023–24ರ ಆರ್ಥಿಕ ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ನಲ್ಲಿ ಕೋಕಿಂಗ್‌ ಅಲ್ಲದ ಕಲ್ಲಿದ್ದಲು ಆಮದು 7.76 ಕೋಟಿ ಟನ್‌ ಇದ್ದರೆ, ಹಿಂದಿನ ಇದೇ ಅವಧಿಯಲ್ಲಿ 9.27 ಕೋಟಿ ಟನ್‌ ಇತ್ತು. ಕೋಕಿಂಗ್‌ ಕಲ್ಲಿದ್ದಲು ಆಮದು ಈ ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ನಲ್ಲಿ 2.94 ಕೋಟಿ ಟನ್‌ಗೆ ಏರಿದ್ದರೆ, ಹಿಂದಿನ ಇದೇ ಅವಧಿಯಲ್ಲಿ ಇದು 2.8 ಕೋಟಿ ಟನ್‌ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT