ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ನೂಲು, ಉಡುಪು ರಫ್ತು ಹೆಚ್ಚಳ

Published 27 ಏಪ್ರಿಲ್ 2024, 13:31 IST
Last Updated 27 ಏಪ್ರಿಲ್ 2024, 13:31 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಹತ್ತಿ ನೂಲು, ಉಡುಪು ಹಾಗೂ ಕೈಮಗ್ಗ ಉತ್ಪನ್ನಗಳ ರಫ್ತು ಪ್ರಮಾಣವು ಶೇ 6.71ರಷ್ಟು ಹೆಚ್ಚಳವಾಗಿದೆ. ಒಟ್ಟು ₹97,578 ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

2022–23ನೇ ಆರ್ಥಿಕ ವರ್ಷದಲ್ಲಿ ₹91 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗಿತ್ತು. ಮಾರ್ಚ್‌ನಲ್ಲಿ ರಫ್ತು ಪ್ರಮಾಣವು ಶೇ 6.78ರಷ್ಟು ಹೆಚ್ಚಳವಾಗಿದ್ದು, ಒಟ್ಟು ₹8,340 ಕೋಟಿ ಮೌಲ್ಯದ ಉತ್ಪನ್ನಗಳನ್ನು ವಿದೇಶಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದೆ.

ಭಾರತವು ಪ್ರಮುಖವಾಗಿ ಅಮೆರಿಕ, ಬಾಂಗ್ಲಾದೇಶ, ಚೀನಾ, ಶ್ರೀಲಂಕಾ ಹಾಗೂ ಯುಎಇಗೆ ಹತ್ತಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಈ ಪೈಕಿ ಅಮೆರಿಕಕ್ಕೆ ಶೇ 25ರಷ್ಟು ಉತ್ಪನ್ನಗಳು ಪೂರೈಸಲಾಗುತ್ತವೆ. 

ಪೂರ್ವ ಕೆರಿಬಿಯನ್‌ ಪ್ರದೇಶದಲ್ಲಿರುವ ಅಂಗುಯಿಲಾ, ಸರ್ಬಿಯಾ, ಜಾರ್ಜಿಯಾ, ಸ್ವೀಡನ್‌, ಸೈಪ್ರಸ್‌, ಅಜೆರ್ಬೈಜಾನ್ ಮತ್ತು ಇರಾನ್‌ಗೂ ರಫ್ತು ಮಾಡಲಾಗಿದೆ. 

ಪ್ರತಿ ತಿಂಗಳು ಈ ಉತ್ಪನ್ನಗಳ ಸರಾಸರಿ ರಫ್ತು ಮೌಲ್ಯವು ₹8,340 ಕೋಟಿ ಆಗಿದೆ. 

ಭಾರತವು ಇಡೀ ವಿಶ್ವದಲ್ಲಿಯೇ ಅತಿಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಉತ್ಪಾದಿಸುತ್ತದೆ. ಜಾಗತಿಕಮಟ್ಟದಲ್ಲಿ ಶೇ 23ರಷ್ಟು ಉತ್ಪಾದನಾ ಪಾಲು ಹೊಂದಿದೆ. ಈ ವಲಯವು ಶ್ರಮಿಕ ಪ್ರಧಾನವಾಗಿದೆ.

2030ರ ವೇಳೆಗೆ ಜವಳಿ ರಫ್ತು ವಹಿವಾಟಿನ ಮೌಲ್ಯವನ್ನು ₹8.34 ಲಕ್ಷ ಕೋಟಿಗೆ ಹೆಚ್ಚಿಸಲು ದೇಶದ ರಫ್ತುದಾರರು ಗುರಿ ಹೊಂದಿದ್ದಾರೆ. 2023–24ರಲ್ಲಿ ದೇಶದ ವಾಣಿಜ್ಯ ಸರಕು ರಫ್ತಿನ ಪ್ರಮಾಣವು ಶೇ 3.11ರಷ್ಟು ಕುಸಿತ ಕಂಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT