ಬೆಂಗಳೂರು: 'ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ಸಮ್ಮತಿಸಿದೆ. ವೈಯಕ್ತಿಕವಾಗಿ ಇದು ನನ್ನ ಪಾಲಿಗೆ ಬಹುದೊಡ್ಡ ಸಾಧನೆಯಾಗಿದೆ. ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ಎದುರು ಐದು ವಿಕೆಟ್ ಪಡೆದಿದ್ದಕ್ಕಿಂತಲೂ ದೊಡ್ಡ ಸಾಧನೆ ಇದು. ಉದ್ಘಾಟನೆ ಪಂದ್ಯ ಹಾಗೂ ಸಮಾರಂಭ, ಪ್ಲೇ ಆಫ್ ಪಂದ್ಯ ಹಾಗೂ ಫೈನಲ್ ಹಣಾಹಣಿ ಕೂಡ ಇಲ್ಲಿಯೇ ನಡೆಯಲಿದೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದರು.

‘ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಶೀಘ್ರದಲ್ಲಿಯೇ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ’ ಎಂದು ಮಂಗಳವಾರ ರಾತ್ರಿ ಪ್ರಸಾದ್ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯಲ್ಲಿ ಇನ್ನೂ ಸ್ವಲ್ಪ ಕೆಲಸ ಬಾಕಿ ಇದೆ. ಆದರೆ ಮಹೇಶ್ವರ ರಾವ್ ನೇತೃತ್ವದ ಕಾರ್ಯಪಡೆಗೆ ನಾವು ಭರವಸೆ ಕೊಟ್ಟಿರುವಂತೆ ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು’ ಎಂದು ಪ್ರಸಾದ್ ಹೇಳಿದರು.

‘ಕಾರ್ಯಪಡೆಯು ಇಲ್ಲಿ ಕೆಲವು ಸಭೆಗಳನ್ನು ನಡೆಸಿತ್ತು. ಅವರು ಕೇಳಿದ ವಿವರಗಳನ್ನು ನೀಡಿದ್ದೇವೆ. ನಿನ್ನೆ ಮುಂಜಾನೆ (ಸೋಮವಾರ) ಕೂಡ ಅವರು ಬಂದು ಕಾಮಗಾರಿಗಳನ್ನು ಪರಿಶೀಲಿಸಿದ್ದರು. ಇದೇ 15ರಂದು ಆರ್ಸಿಬಿ ಆಟಗಾರರು ಇಲ್ಲಿ ಸೇರಿಕೊಳ್ಳುವರು. ಮೊದಲ ಪಂದ್ಯಕ್ಕೆ ಒಂದು ವಾರ ಮುನ್ನ ಅನ್ಬಾಕ್ಸ್ (ಟಿಕೆಟ್ ಇರುತ್ತದೆ) ಕಾರ್ಯಕ್ರಮ ಕೂಡ ನಡೆಯಲಿದೆ’ ಎಂದರು.

‘ಪ್ರೇಕ್ಷಕರ ಸುರಕ್ಷತೆಗೆ ನಾವು ಆದ್ಯತೆ ನೀಡುತ್ತೇವೆ. ಆದ್ದರಿಂದ ಎಲ್ಲ ವ್ಯವಸ್ಥೆಗಳೂ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು. 13 ಹೊಸ ಪ್ರವೇಶ ದ್ವಾರಗಳನ್ನು ಸಿದ್ಧಗೊಳಿಸಲಾಗಿದೆ. ಪರಿಣತರ ಸಮಿತಿಯು ಸೂಚಿಸಿದಂತೆ ಭದ್ರತಾ ವ್ಯವಸ್ಥೆ ಮಾಡಲಾಗುವುದು. ಪಂದ್ಯಗಳನ್ನು ವೀಕ್ಷಿಸಲು ಬರುವವರು ಸಾರ್ವಜನಿಕ ಸಾರಿಗೆ ಮತ್ತು ಮೆಟ್ರೋ ರೈಲುಗಳನ್ನು ಬಳಸಬೇಕೆಂದು ಮನವಿ ಮಾಡುತ್ತೇವೆ’ ಎಂದು ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.