ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಲ್ತಿ ಖಾತೆ ಕೊರತೆ ಏರಿಕೆ: ಭಾರತೀಯ ರಿಸರ್ವ್‌ ಬ್ಯಾಂಕ್‌

Published : 30 ಸೆಪ್ಟೆಂಬರ್ 2024, 14:25 IST
Last Updated : 30 ಸೆಪ್ಟೆಂಬರ್ 2024, 14:25 IST
ಫಾಲೋ ಮಾಡಿ
Comments

ಮುಂಬೈ: ದೇಶದಲ್ಲಿ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಒಟ್ಟು ಜಿಡಿಪಿಯ ಶೇ 1.1ಕ್ಕೆ (₹81,287 ಕೋಟಿ) ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹74,586 ಕೋಟಿಯಷ್ಟಾಗಿತ್ತು. ಸರಕುಗಳ ವ್ಯಾಪಾರ ಅಂತರವು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹4.75 ಲಕ್ಷ ಕೋಟಿ ಆಗಿತ್ತು. ಅದು ಈ ಬಾರಿ ₹5.45 ಲಕ್ಷ ಕೋಟಿಗೆ ಹೆಚ್ಚಳ ಆಗಿದೆ.

ಸೇವಾ ವಲಯದ ನಿವ್ವಳ ಮೊತ್ತವು ₹3.32 ಲಕ್ಷ ಕೋಟಿಯಾಗಿದೆ. ದೇಶದಲ್ಲಿ ಕಂಪ್ಯೂಟರ್‌, ವ್ಯಾ‍ಪಾರ, ಪ್ರವಾಸಿ ಮತ್ತು ಪ್ರಯಾಣ ಸೇವೆಗಳು ಏರಿಕೆ ಕಂಡಿವೆ. ಆದರೆ, ನಿವ್ವಳ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ₹7,543 ಕೋಟಿ ಇಳಿಕೆಯಾಗಿದೆ ಎಂದು ತಿಳಿಸಿದೆ. 

ಅನಿವಾಸಿ ಭಾರತೀಯರ ಠೇವಣಿಗಳು ₹33,527 ಕೋಟಿ, ನಿವ್ವಳ ವಿದೇಶಿ ನೇರ ಹೂಡಿಕೆಯ ಹರಿವು ₹52,803 ಕೋಟಿಯಾಗಿದೆ ಎಂದು ಆರ್‌ಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT