ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಹಾರ ಧಾನ್ಯ ಉತ್ಪಾದನೆ ದಾಖಲೆ: ಬೇಳೆಕಾಳು ಕುಸಿತ

ಗೋಧಿ, ಅಕ್ಕಿ ಉತ್ಪಾದನೆ ಏರಿಕೆ: ಬೇಳೆಕಾಳು ಕುಸಿತ
Published : 25 ಸೆಪ್ಟೆಂಬರ್ 2024, 15:39 IST
Last Updated : 25 ಸೆಪ್ಟೆಂಬರ್ 2024, 15:39 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ಜೂನ್‌ ಅಂತ್ಯಕ್ಕೆ ಕೊನೆಗೊಂಡ 2023–24ನೇ ಸಾಲಿನ ಬೆಳೆ ವರ್ಷದಲ್ಲಿ ದೇಶದಲ್ಲಿ 332.22 ದಶಲಕ್ಷ ಟನ್‌ ಆಹಾರಧಾನ್ಯಗಳು ಉತ್ಪಾದನೆಯಾಗಿದ್ದು, ದಾಖಲೆಯಾಗಿದೆ. ಈ ಪೈಕಿ ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಬುಧವಾರ ತಿಳಿಸಿದೆ.

2022–23ನೇ ಸಾಲಿನ ಬೆಳೆ ವರ್ಷದಲ್ಲಿ 329.6 ದಶಲಕ್ಷ ಟನ್‌ ಉತ್ಪಾದನೆಯಾಗಿತ್ತು. ಇದಕ್ಕೆ ಹೋಲಿಸಿದರೆ 26.1 ಲಕ್ಷ ಟನ್ ಹೆಚ್ಚು ಉತ್ಪಾದನೆಯಾಗಿದೆ ಎಂದು ಹೇಳಿದೆ.

2022–23ರಲ್ಲಿ 135.75 ದಶಲಕ್ಷ ಟನ್‌ ಅಕ್ಕಿ ಉತ್ಪಾದನೆಯಾಗಿತ್ತು. ಈ ಬಾರಿ 137.82 ದಶಲಕ್ಷ ಟನ್‌ ಉತ್ಪಾದನೆಯಾಗಿದೆ. 113.29 ದಶಲಕ್ಷ ಟನ್‌ ಗೋಧಿ ಉತ್ಪಾದನೆಯಾಗಿದೆ ಎಂದು ತಿಳಿಸಿದೆ.

ಆದರೆ, ಬೇಳೆಕಾಳುಗಳ ಉತ್ಪಾದನೆಯಲ್ಲಿ ಇಳಿಕೆಯಾಗಿದೆ. 2022–23ರಲ್ಲಿ 26.05 ದಶಲಕ್ಷ ಟನ್‌ ಉತ್ಪಾದನೆಯಾಗಿತ್ತು. ಈ ಬಾರಿ 24.24 ದಶಲಕ್ಷ ಟನ್‌ ಉತ್ಪಾದನೆಯಾಗಿದೆ. ಎಣ್ಣೆಕಾಳುಗಳ ಉತ್ಪಾದನೆಯಲ್ಲೂ ಕುಸಿತವಾಗಿದೆ. ಹಿಂದಿನ ಬೆಳೆ ವರ್ಷದಲ್ಲಿ 41.35 ದಶಲಕ್ಷ ಟನ್‌ ಉತ್ಪಾದನೆಯಾಗಿತ್ತು. ಈ ಬಾರಿ 39.66 ದಶಲಕ್ಷ ಟನ್‌ಗೆ ಕುಗ್ಗಿದೆ ಎಂದು ವಿವರಿಸಿದೆ.

ದಕ್ಷಿಣ ರಾಜ್ಯಗಳಲ್ಲಿ ಬರದ ಛಾಯೆ ಕಾಣಿಸಿಕೊಂಡಿತ್ತು. ಹಾಗಾಗಿ, ಬೇಳೆಕಾಳು, ಒರಟು ಧಾನ್ಯಗಳು, ಸೋಯಾಬಿನ್‌ ಮತ್ತು ಹತ್ತಿ ಉತ್ಪಾದನೆಯಲ್ಲಿ ಕುಸಿತವಾಗಿದೆ. ಆಗಸ್ಟ್‌ನಲ್ಲಿ ರಾಜಸ್ಥಾನದಲ್ಲಿ ಒಣಹವೆ ಇತ್ತು. ಹಾಗಾಗಿ, ಉತ್ಪಾದನೆ ಮೇಲೆ ಪರಿಣಾಮ ಬೀರಿದೆ ಎಂದು ಸಚಿವಾಲಯ ತಿಳಿಸಿದೆ.

ಹಿಂದಿನ ಬೆಳೆ ವರ್ಷದಲ್ಲಿ ಸಕ್ಕರೆ ಉತ್ಪಾದನೆಯು 490.53 ದಶಲಕ್ಷ ಟನ್‌ನಷ್ಟಿತ್ತು. ಈ ಬೆಳೆ ವರ್ಷದಲ್ಲಿ 453.15 ದಶಲಕ್ಷ ಟನ್‌ಗೆ ಇಳಿಕೆಯಾಗಿದೆ. ಹತ್ತಿ ಉತ್ಪಾದನೆಯು 33.66 ಬೇಲ್ಸ್‌ನಿಂದ 32.52 ದಶಲಕ್ಷ ಬೇಲ್ಸ್‌ಗೆ ಇಳಿಕೆಯಾಗಿದೆ (ಒಂದು ಬೇಲ್‌ ಎಂದರೆ 170 ಕೆ.ಜಿ) ಎಂದು ತಿಳಿಸಿದೆ.

ಅಕ್ಕಿ, ಗೋಧಿ, ಒರಟು ಧಾನ್ಯಗಳು, ಸಿರಿಧಾನ್ಯಗಳು ಮತ್ತು ಬೇಳೆಕಾಳುಗಳು ಆಹಾರ ಧಾನ್ಯಗಳ ಪಟ್ಟಿಯಲ್ಲಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿರುವ ಮಾಹಿತಿ ಅನ್ವಯ ಈ ಉತ್ಪಾದನೆ ಪ್ರಮಾಣವನ್ನು ಅಂದಾಜಿಸಲಾಗಿದೆ ಎಂದು ಸಚಿವಾಲಯ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT