ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿನಿಮಯ ಸಂಗ್ರಹ ಏರಿಕೆ

Published 11 ಮೇ 2024, 14:11 IST
Last Updated 11 ಮೇ 2024, 14:11 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕಳೆದ ಮೂರು ವಾರದಿಂದ ಸತತವಾಗಿ ಇಳಿಕೆಯಾಗಿದ್ದ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ಏರಿಕೆಯಾಗಿದೆ. 

ಕೊನೆಗೊಂಡ ವಾರದಲ್ಲಿ ₹30,642 ಕೋಟಿ ಹೆಚ್ಚಳವಾಗಿದೆ. ಒಟ್ಟಾರೆ ಮೀಸಲು ಸಂಗ್ರಹವು ₹53.59 ಲಕ್ಷ ಕೋಟಿಗೆ (641.59 ಬಿಲಿಯನ್‌ ಡಾಲರ್) ಮುಟ್ಟಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ. 

ಏಪ್ರಿಲ್‌ 26ಕ್ಕೆ ಅಂತ್ಯಗೊಂಡ ವಾರದಲ್ಲಿ ₹20,149 ಕೋಟಿ ಕುಸಿದಿತ್ತು. ಏಪ್ರಿಲ್‌ 5ಕ್ಕೆ ಕೊನೆಗೊಂಡ ವಾರದಲ್ಲಿ ಒಟ್ಟು ಮೀಸಲು ಸಂಗ್ರಹವು ₹54.18 ಲಕ್ಷ ಕೋಟಿಗೆ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು.  

ಮೇ 3ಕ್ಕೆ ಅಂತ್ಯಗೊಂಡ ವಾರದಲ್ಲಿ ಮೀಸಲು ಸಂಗ್ರಹದಲ್ಲಿ ವಿದೇಶಿ ಕರೆನ್ಸಿಗಳ ಸಂಗ್ರಹವು ಗರಿಷ್ಠ ಪ್ರಮಾಣದಲ್ಲಿದೆ. ವಿದೇಶಿ ಕರೆನ್ಸಿಗಳ ಸಂಗ್ರಹವು ₹37,250 ಕೋಟಿ ಹೆಚ್ಚಳವಾಗಿದ್ದು, ಒಟ್ಟು ಸಂಗ್ರಹವು ₹47.13 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಆರ್‌ಬಿಐ ವಿವರಿಸಿದೆ.  

ಮೀಸಲು ಸಂಗ್ರಹದಲ್ಲಿ ಅಮೆರಿಕದ ಡಾಲರ್‌ ಹೊರತುಪಡಿಸಿದರೆ ಯೂರೊ, ಪೌಂಡ್ ಹಾಗೂ ಯೆನ್ ಕರೆನ್ಸಿಯ ಮೌಲ್ಯ ಕಡಿಮೆಯಾಗಿದೆ.  

ಆದರೆ, ಚಿನ್ನದ ಮೀಸಲು ಸಂಗ್ರಹವು ₹5,455 ಕೋಟಿ ಇಳಿಕೆಯಾಗಿದ್ದು, ₹4.58 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಮೀಸಲು ಸಂಗ್ರಹವು ₹1,169 ಕೋಟಿ ಇಳಿಕೆಯಾಗಿದ್ದು, ₹37,584 ಕೋಟಿ ಆಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT