ಶುಕ್ರವಾರ, ಮಾರ್ಚ್ 24, 2023
22 °C

ಆಗಸ್ಟ್‌ನಲ್ಲಿ ಇಂಧನ ಬೇಡಿಕೆ ಶೇ 11ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಇಂಧನ ಬೇಡಿಕೆಯು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ 11ರಷ್ಟು ಏರಿಕೆ ಕಂಡಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದ ‘ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕ’ (ಪಿಪಿಎಸಿ) ನೀಡಿರುವ ಅಂಕಿ–ಅಂಶಗಳ ಪ್ರಕಾರ, 2020ರ ಆಗಸ್ಟ್‌ನಲ್ಲಿ ಇಧನ ಬೇಡಿಕೆಯು 1.44 ಕೋಟಿ ಟನ್‌ಗಳಷ್ಟು ಇತ್ತು. 2021ರ ಆಗಸ್ಟ್‌ನಲ್ಲಿ 1.60 ಕೋಟಿ ಟನ್‌ಗಳಿಗೆ ಏರಿಕೆ ಆಗಿದೆ.

ಪೆಟ್ರೋಲ್‌ ಮಾರಾಟವು ಶೇ 13ರಷ್ಟು ಹೆಚ್ಚಾಗಿದ್ದು 26.9 ಲಕ್ಷ ಟನ್‌ಗಳಿಗೆ ತಲುಪಿದೆ. ಡೀಸೆಲ್‌ ಮಾರಾಟ ಶೇ 15.6ರಷ್ಟು ಹೆಚ್ಚಾಗಿ 56 ಲಕ್ಷ ಟನ್‌ಗಳಿಗೆ ಏರಿಕೆ ಆಗಿದೆ. ಅಡುಗೆ ಅನಿಲ ಸಿಲಿಂಡರ್‌ ಮರಾಟ ಶೇ 2.4ರಷ್ಟು ಹೆಚ್ಚಾಗಿದೆ. ವಿಮಾನ ಇಂಧನ ಮಾರಾಟ ಶೇ 24ರಷ್ಟು ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು