ಮೂಲಸೌಕರ್ಯ ಪ್ರಗತಿ ಕುಸಿತ

7
ಕಚ್ಚಾ ತೈಲ, ನೈಸರ್ಗಿಕ ಉತ್ಪಾದನೆಯಲ್ಲಿ ಇಳಿಕೆ

ಮೂಲಸೌಕರ್ಯ ಪ್ರಗತಿ ಕುಸಿತ

Published:
Updated:

ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆಯು ಮೇ ತಿಂಗಳಿನಲ್ಲಿ 10 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ.

2017ರ ಜುಲೈನಲ್ಲಿ ಶೇ 2.9 ರಷ್ಟು ಕನಿಷ್ಠ ಮಟ್ಟದ ಪ್ರಗತಿ ಕಂಡಿತ್ತು. 8 ಕೈಗಾರಿಕೆಗಳು ಮೇ ತಿಂಗಳಿನಲ್ಲಿ ಶೇ 3.6 ರಷ್ಟು ಪ್ರಗತಿ ಸಾಧಿಸಿವೆ. 2017ರ ಮೇನಲ್ಲಿ ಶೇ 3.9 ರಷ್ಟು ಪ್ರಗತಿ ಸಾಧಿಸಿದ್ದವು.

ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆ ನಕಾರಾತ್ಮಕ ಮಟ್ಟಕ್ಕೆ ಇಳಿಕೆ ಕಂಡಿದೆ. ಇದು ಒಟ್ಟಾರೆ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ. ಕಲ್ಲಿದ್ದಲು ಮತ್ತು ರಸಗೊಬ್ಬರ ಕೈಗಾರಿಕೆಗಳು ಮಾತ್ರವೇ ಶೇ 12.1 ಮತ್ತು ಶೇ 8.4 ರಷ್ಟು ಉತ್ತಮ ಪ್ರಗತಿ ಸಾಧಿಸಿವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !