ಭಾನುವಾರ, ಜೂನ್ 20, 2021
29 °C

ಚೇತರಿಸಿಕೊಳ್ಳದ ಮೂಲಸೌಕರ್ಯ ವಲಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆಯು ಸತತ ನಾಲ್ಕನೇ ತಿಂಗಳಿನಲ್ಲಿಯೂ ಇಳಿಕೆಯಾಗಿದೆ.

ಮೂಲಸೌಕರ್ಯ ಕೈಗಾರಿಕೆಗಳ ಜೂನ್‌ ತಿಂಗಳ ಬೆಳವಣಿಗೆಯು ಶೇ 15ರಷ್ಟು ಇಳಿಕೆಯಾಗಿದೆ. 2019ರ ಜೂನ್‌ನಲ್ಲಿ ಶೇ 1.9ರಷ್ಟು ಪ್ರಗತಿ ಕಂಡಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ರಸಗೊಬ್ಬರ ಹೊರತುಪಡಿಸಿ, ಕಚ್ಚಾತೈಲ, ನೈಸರ್ಗಿಕ ಅನಿಲ, ತೈಲ ಸಂಸ್ಕರಣೆ, ಉಕ್ಕು, ಸಿಮೆಂಟ್‌ ಹಾಗೂ ವಿದ್ಯುತ್‌ ವಲಯಗಳ ಬೆಳವಣಿಗೆ ನಕಾರಾತ್ಮಕ ಮಟ್ಟದಲ್ಲಿದೆ.

2020–21ರ ಏಪ್ರಿಲ್‌–ಜೂನ್‌ ಅವಧಿಗೆ ಮೂಲಸೌಕರ್ಯ ವಲಯದ ಬೆಳವಣಿಗೆ ಶೇ 24.6ರಷ್ಟು ಇಳಿಕೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 3.4ರಷ್ಟು ಪ್ರಗತಿ ಕಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.