ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಫಸ್ಟ್‌: ಬಿಡ್‌ನಿಂದ ಜಿಂದಾಲ್‌ ಹಿಂದಕ್ಕೆ?

ಕಂಪನಿಯ ಹಣಕಾಸು ಮಾಹಿತಿ ಪರಿಶೀಲಿಸಿದ ಬಳಿಕ ನಿರ್ಧಾರ: ಮೂಲಗಳ ಮಾಹಿತಿ
Published 21 ನವೆಂಬರ್ 2023, 15:37 IST
Last Updated 21 ನವೆಂಬರ್ 2023, 15:37 IST
ಅಕ್ಷರ ಗಾತ್ರ

ಮುಂಬೈ: ನಷ್ಟದಲ್ಲಿರುವ ಗೋ ಫಸ್ಟ್ ವಿಮಾನಯಾನ ಕಂಪನಿಯನ್ನು ಖರೀದಿಸುವ ಸಂಬಂಧ ಬಿಡ್‌ ಸಲ್ಲಿಸದೇ ಇರಲು ಜಿಂದಾಲ್ ಪವರ್ ಕಂಪನಿಯು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ಖರೀದಿ ಆಸಕ್ತಿ ವ್ಯಕ್ತಪಡಿಸಿ ಬಿಡ್‌ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿದೆ. ಗೋ ಫಸ್ಟ್ ಖರೀದಿಸಲು ಆಸಕ್ತಿ ವ್ಯಕ್ತಪಡಿಸಿ ಜಿಂದಾಲ್‌ ಕಂಪನಿ ಮಾತ್ರವೇ ಬಿಡ್ ಸಲ್ಲಿಸಿತ್ತು. ಅದನ್ನು ಸಾಲದಾತರ ಸಮಿತಿಯು ಒಪ್ಪಿಕೊಂಡಿತ್ತು. ಆದರೆ, ಕಂಪನಿಯ ಹಣಕಾಸು ಮಾಹಿತಿಯನ್ನು ಪರಿಶೀಲಿಸಿದ ಬಳಿಕ ಖರೀದಿಗೆ ಬಿಡ್‌ ಸಲ್ಲಿಸದೇ ಇರುವ ನಿರ್ಧಾರವನ್ನು ಕೈಗೊಂಡಿತು ಎಂದು ತಿಳಿಸಿವೆ.

ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ಬಿಡ್‌ ಸಲ್ಲಿಕೆಯ ಗಡುವನ್ನು ವಿಸ್ತರಿಸಬಹುದಾಗಿದೆ. ಆದರೆ, ಸಾಲದಾತರ ಸಮಿತಿಯು ಆ ರೀತಿ ಮಾಡಲು ಒಪ್ಪಿಲ್ಲ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.

ಕಂಪನಿಯ ಹಣಕಾಸಿನ ಮಾಹಿತಿ ಮತ್ತು ಮೌಲ್ಯವನ್ನು ತಿಳಿದುಕೊಳ್ಳುವ ಉದ್ದೇಶದಿಂದಲೇ ಖರೀದಿ ಆಸಕ್ತಿ ವ್ಯಕ್ತಪಡಿಸಿ ಬಿಡ್‌ ಸಲ್ಲಿಸಲಾಗುತ್ತದೆ. ಅದನ್ನು ಪರಿಶೀಲಿಸಿದ ಬಳಿಕ ಜಿಂದಾಲ್ಕ ಕಂಪನಿಯು ಬಿಡ್‌ ಸಲ್ಲಿಸದಿರಲು ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿವೆ.

ಈ ಬೆಳವಣಿಗೆಯ ಕುರಿತು ಜಿಂದಾಲ್ ಪವರ್ ಮತ್ತು ಗೋ ಫಸ್ಟ್ ಕಂಪನಿಯ ದಿವಾಳಿ ಪ್ರಕ್ರಿಯೆ ನಿರ್ವಹಿಸುವ ವೃತ್ತಿಪರ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುವ ಮೂಲಕ ಗೋ ಫಸ್ಟ್ ಕಂಪನಿಯು ಸ್ವಯಂ ಪ್ರೇರಿತವಾಗಿ ಮೇನಲ್ಲಿ ದಿವಾಳಿ ಪ್ರಕ್ರಿಯೆಗೆ ಒಳಗಾಗಿದೆ. ಕಂಪನಿಯು ₹6,521 ಕೋಟಿ ಸಾಲ ಉಳಿಸಿಕೊಂಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್‌ ಆಫ್ ಬರೋಡಾ, ಐಡಿಬಿಯ ಬ್ಯಾಂಕ್ ಮತ್ತು ಡಾಯಿಷ್‌ ಬ್ಯಾಂಕ್‌ಗಳು ಕಂಪನಿಗೆ ಸಾಲ ನೀಡಿರುವ ಪ್ರಮುಖ ಬ್ಯಾಂಕ್‌ಗಳಾಗಿವೆ.

ಸಾಲದಾತರ ಸಮಿತಿಯು ಬುಧವಾರ ಸಭೆ ಸೇರಲಿದ್ದು, ಮುಂದಿನ ಕ್ರಮದ ಬಗ್ಗೆ ನಿರ್ಧಾರಕ್ಕೆ ಬರಲಿದೆ ಎಂದು ಬ್ಯಾಂಕಿಂಗ್ ಮೂಲವೊಂದು ತಿಳಿಸಿದೆ. ಕಂಪನಿಯ ಆಸ್ತಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ನಗದಾಗಿ ಪರಿವರ್ತಿಸುವುದೊಂದೇ ಮುಂದಿರುವ ಆಯ್ಕೆ ಎಂದೂ ಹೇಳಿವೆ.

ಕಂಪನಿಯು ಸಾಲ ಪಡೆಯಲು ಅಡಮಾನ ಇಟ್ಟಿರುವ ಆಸ್ತಿಗಳ ಮೌಲ್ಯಮಾಪನವನ್ನು ಬ್ಯಾಂಕ್‌ಗಳು ಮಾಡುತ್ತಿವೆ ಎಂದೂ ತಿಳಿಸಿವೆ.

ಗೋ ಫಸ್ಟ್‌ ಸಾಲ ₹6,521 ಕೋಟಿ ಮುಂದಿನ ಆಯ್ಕೆ ಪರಿಶೀಲಿಸಲಿರುವ ಸಾಲದಾತರ ಸಮಿತಿ ಕಂಪನಿಯ ಆಸ್ತಿ ಮಾರಾಟವೊಂದೇ ದಾರಿ: ಬ್ಯಾಂಕಿಂಗ್ ಮೂಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT