ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ: ಎಸ್‌ಆ್ಯಂಡ್‌ಪಿ

ತುಸು ತಗ್ಗಿದ ತಯಾರಿಕಾ ಚಟುವಟಿಕೆ
Published 3 ಜುಲೈ 2023, 23:35 IST
Last Updated 3 ಜುಲೈ 2023, 23:35 IST
ಅಕ್ಷರ ಗಾತ್ರ

ನವದೆಹಲಿ: ಮೇ ತಿಂಗಳಿನಲ್ಲಿ 31 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ್ದ ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಜೂನ್‌ನಲ್ಲಿ ಇಳಿಕೆ ಕಂಡಿವೆ. ಹೀಗಿದ್ದರೂ ಸಕಾರಾತ್ಮಕ ಮಟ್ಟದಲ್ಲಿಯೇ ಇವೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್‌ ಮ್ಯಾನೇಜರ್ಸ್ ಇಂಡೆಕ್ಸ್‌ (ಪಿಎಂಐ) ಮೇ ತಿಂಗಳಿನಲ್ಲಿ 58.7ರಷ್ಟು ಇದ್ದಿದ್ದು ಜೂನ್‌ನಲ್ಲಿ 57.8ಕ್ಕೆ ಇಳಿದಿದೆ. ಮಾರುಕಟ್ಟೆಯು ಅನುಕೂಲಕರವಾಗಿ ಇರುವುದರಿಂದ ಹೊಸ ವಹಿವಾಟುಗಳಿಗೆ ಬೇಡಿಕೆಯು ವೇಗವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ಸಕಾರಾತ್ಮಕ ಬೆಳವಣಿಗೆ ಮುಂದುವರಿ
ದಿದೆ ಎಂದು ಅದು ತಿಳಿಸಿದೆ.

ಭಾರತದಲ್ಲಿ ತಯಾರಾಗುವ ಉತ್ಪನ್ನಗಳಿಗೆ ದೇಶ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ಇದೆ ಎನ್ನುವುದನ್ನು ಜೂನ್‌ ತಿಂಗಳ ಅಂಕಿ–ಅಂಶವು ಮತ್ತೊಮ್ಮೆ ಹೇಳಿದೆ ಎಂದು ಅದು ತಿಳಿಸಿದೆ.

ಹೆಚ್ಚುವರಿ ಕೆಲಸಗಾರರನ್ನು ನೇಮಿಸಿಕೊಳ್ಳುವ ಮೂಲಕ ಕಂಪನಿಗಳು ಬೇಡಿಕೆಯನ್ನು ಪೂರೈಸುತ್ತಿವೆ. ಆದರೆ, ನೇಮಕಾತಿ ಹೆಚ್ಚಳದಲ್ಲಿನ ವೇಗವು ಮಂದಗತಿಯಲ್ಲಿದ್ದು ಬಹುತೇಕ ಮೇ ತಿಂಗಳ ಮಟ್ಟಕ್ಕೆ ಸಮನಾಗಿದೆ.

ಬೇಡಿಕೆ ಚೆನ್ನಾಗಿ ಇರುವ ಕಾರಣ, ತಯಾರಿಕಾ ವಲಯದ ಕಂಪನಿಗಳು ತಮ್ಮ ಬೆಲೆಯನ್ನು ಅದಕ್ಕೆ ಹೊಂದಿಸಿಕೊಳ್ಳುತ್ತಿವೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT