ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ 15 ದಿನದಲ್ಲಿ 7 ಸಾವಿರ ಕೋಟಿ ಯೂನಿಟ್‌ ವಿದ್ಯುತ್‌ ಬಳಕೆ!

Published 18 ಏಪ್ರಿಲ್ 2024, 14:17 IST
Last Updated 18 ಏಪ್ರಿಲ್ 2024, 14:17 IST
ಅಕ್ಷರ ಗಾತ್ರ

ನವದೆಹಲಿ: ಆರ್ಥಿಕ ಚಟುವಟಿಕೆ ಮತ್ತು ಬಳಕೆಯಲ್ಲಿನ ಸುಧಾರಣೆಯಿಂದಾಗಿ ಏಪ್ರಿಲ್‌ ತಿಂಗಳ ಮೊದಲ 15 ದಿನದಲ್ಲಿ ದೇಶದ ವಿದ್ಯುತ್‌ ಬಳಕೆ ಶೇ 10ರಷ್ಟು ಏರಿಕೆಯಾಗಿದೆ. 

ಹಿಂದಿನ ವರ್ಷದ ಇದೇ ಅವಧಿಯಲ್ಲಿ 6,424 ಕೋಟಿ ಯೂನಿಟ್‌ ವಿದ್ಯುತ್‌ ಬಳಕೆ ಆಗಿದ್ದರೆ, ಅದು ಈಗ 7,066 ಕೋಟಿ ಯೂನಿಟ್‌ಗೆ ಹೆಚ್ಚಳವಾಗಿದೆ ಎಂದು ವಿದ್ಯುತ್‌ ಸಚಿವಾಲಯ ತಿಳಿಸಿದೆ. ದಿನದ ವಿದ್ಯುತ್ ಗರಿಷ್ಠ ಬೇಡಿಕೆ 206 ಗಿಗಾವಾಟ್‌ನಿಂದ 218 ಗಿಗಾವಾಟ್‌ಗೆ ಹೆಚ್ಚಳವಾಗಿದೆ.  

ವಿದ್ಯುತ್‌ ಬೇಡಿಕೆಯು ಬೇಸಿಗೆ ಕಾಲದಲ್ಲಿ (ಏಪ್ರಿಲ್‌–ಜೂನ್‌) ಗರಿಷ್ಠ 260 ಗಿಗಾವಾಟ್‌ಗೆ ಮುಟ್ಟಲಿದೆ ಎಂದು ಸಚಿವಾಲಯವು ಅಂದಾಜಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಸಾರ್ವಕಾಲಿಕ ವಿದ್ಯುತ್‌ ಬೇಡಿಕೆ 243 ಗಿಗಾವಾಟ್‌ ಮುಟ್ಟಿತ್ತು. ಪ್ರಸಕ್ತ ಬೇಸಿಗೆಯಲ್ಲಿ ದೇಶದ ಬಹುತೇಕ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಇರಲಿದೆ ಎಂದು ಭಾರತೀಯ ಹವಮಾನ ಇಲಾಖೆಯು (ಐಎಂಡಿ) ಅಂದಾಜಿಸಿದೆ.

ವಿದ್ಯುತ್‌ ಬಳಕೆಯು ಎರಡಂಕಿಯಲ್ಲಿದ್ದು, ಇದು ಆರ್ಥಿಕ ಚಟುವಟಿಕೆ ಸುಧಾರಣೆ ಮತ್ತು ಬಳಕೆಯ ಮಾದರಿಯಲ್ಲಿ ಬದಲಾವಣೆಯನ್ನು ತೋರಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾಡಲಾಗುತ್ತಿರುವಂತೆ ಭಾರತದ ಗ್ರಾಹಕರು ವಿವಿಧ ಉಪಕರಣಗಳು ಮತ್ತು ಗ್ಯಾಜೆಟ್‌ಗಳ ಬಳಕೆಯನ್ನು ಹೆಚ್ಚಿಸುತ್ತಿದ್ದಾರೆ. ಇದಲ್ಲದೆ, ಸಾರಿಗೆ ವಲಯದಲ್ಲಿ ವಿದ್ಯುತ್‌ಚಾಲಿತ ಬಸ್‌ಗಳು, ಕಾರುಗಳು, ಆಟೊಗಳು ಮತ್ತು ರೈಲುಗಳಿಂದ ವಿದ್ಯುತ್‌ ಬಳಕೆಯು ಹೆಚ್ಚಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

*****

India's power consumption rises nearly 10 pc to 70.66 bn units in first half of Apr


New Delhi, Apr 17 (PTI) India's power consumption grew nearly 10 per cent year-on-year to 70.66 billion units (BU) in the first half of April this year, showing improvement in economic activities and consumption patterns, according to the power ministry data.

According to the data, power consumption in the country rose to 70.66 BU during April 1-15 this year from 64.24 MU in the year-ago period.

The peak power demand met or the highest supply in a day rose to about 218 GW in the first half of April compared to 206 GW in the same period a year ago.

The highest supply in a day during the entire month of April last year was about 216 GW.

The ministry has projected a peak power demand of 260 GW during the summer season (April to June) in view of longer heat wave duration. The peak power demand had touched an all-time high of 243 GW in September 2023.

The India Meteorological Department (IMD) has predicted above-normal maximum temperatures in most parts of the country during summer this year.

The experts said that the power demand will increase in the coming days as rains in different parts of the country have reduced the need for cooling appliances like air conditioners, desert coolers etc used during this time of the year.

However, they said that power consumption growth in double digits shows improvement in economic activities and change in consumption patterns.

They are of the view that the consumers in India are also increasing their energy consumption on various appliances and gadgets as is being done in the developed world.

Besides, they pointed out that the increase in electricity in the transport sector like electric buses, cars, rickshaws and railways has also changed the consumption pattern and increased per capita use.

Cut-off box -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT