ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ಇಂಧನ ಮಾರಾಟ ಹೆಚ್ಚಳ

Last Updated 10 ಅಕ್ಟೋಬರ್ 2020, 10:44 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಲಾಕ್‌ಡೌನ್‌ ಸಡಿಲಿಸುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ. ಹೀಗಾಗಿ ಜೂನ್‌ ತಿಂಗಳ ನಂತರ ಸೆಪ್ಟೆಂಬರ್‌ನಲ್ಲಿ ಇಂಧನ ಮಾರಾಟ ಹೆಚ್ಚಾಗಿದೆ. ಜೂನ್‌ನಲ್ಲಿ ಇಂಧನ ಬೇಡಿಕೆ 1.56 ಕೋಟಿ ಟನ್‌ಗಳಷ್ಟಿತ್ತು.

ಸೆಪ್ಟೆಂಬರ್‌ನಲ್ಲಿ ಇಂಧನ ಬೇಡಿಕೆ ಶೇ 7.2ರಷ್ಟು ಹೆಚ್ಚಾಗಿದ್ದು,1.54 ಕೋಟಿ ಟನ್‌ಗಳಿಗೆ ತಲುಪಿದೆ. 2019ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಬೇಡಿಕೆಯು ಶೇ 4.4ರಷ್ಟು ಇಳಿಕೆಯಾಗಿದೆ ಎಂದು ಪೆಟ್ರೋಲಿಯಂ ಪ್ಲಾನಿಂಗ್‌ ಆ್ಯಂಡ್‌ ಅನಲಿಸಿಸ್‌ ಸೆಲ್‌ (ಪಿಪಿಎಸಿ) ಮಾಹಿತಿ ನೀಡಿದೆ.

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಮತ್ತು ಪ್ರಯಾಣದ ಮೇಲೆ ನಿರ್ಬಂಧ ಇತ್ತು. ಹೀಗಾಗಿ ಏಪ್ರಿಲ್‌ ಬಳಿಕ ಆಗಸ್ಟ್‌ನಲ್ಲಿ ಇಂಧನ ಬೇಡಿಕೆಯು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿತ್ತು.

ದೇಶದ ಕೈಗಾರಿಕಾ ವಲಯದ ಚಟುವಟಿಕೆಗಳು ಸೆಪ್ಟೆಂಬರ್‌ನಲ್ಲಿ 8 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದು ಸಹ ಇಂಧನ ಬೇಡಿಕೆಯನ್ನು ಹೆಚ್ಚಾಗುವಂತೆ ಮಾಡಿದೆ.

ದೇಶದಲ್ಲಿ ಮಾರಾಟವಾಗುವ ಇಂಧನದಲ್ಲಿ ಶೇ 40ರಷ್ಟು ಪಾಲನ್ನು ಹೊಂದಿರುವ ಡೀಸೆಲ್‌ ಮಾರಾಟ ಸೆಪ್ಟೆಂಬರ್‌ನಲ್ಲಿ 48.5 ಲಕ್ಷದಿಂದ 54.9 ಲಕ್ಷಕ್ಕೆ ಶೇ 13.2ರಷ್ಟು ಏರಿಕೆಯಾಗಿದೆ. ಆದರೆ, 2019ರ ಸೆಪ್ಟೆಂಬರ್‌ಗೆ ಹೋಲಿಸಿದರೆ 2020ರ ಸೆಪ್ಟೆಂಬರ್‌ನಲ್ಲಿ ಮಾರಾಟದಲ್ಲಿ ಶೇ 6ರಷ್ಟು ಇಳಿಕೆಯಾಗಿದೆ.

ಪೆಟ್ರೋಲ್‌ ಮಾರಾಟವು ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಶೇ 2.9ರಷ್ಟು ಹಾಗೂ 2019ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಶೇ 3.3ರಷ್ಟು ಹೆಚ್ಚಾಗಿದೆ. ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಮಾರಾಟ ಶೇ 4.8ರಷ್ಟು ಹೆಚ್ಚಾಗಿದೆ.

ಬೇಡಿಕೆ ವಿವರ

ಏಪ್ರಿಲ್‌; 99 ಲಕ್ಷ ಟನ್‌

ಮೇ; 1.46 ಕೋಟಿ ಟನ್‌

ಜೂನ್‌;1.62 ಕೋಟಿ ಟನ್

ಜುಲೈ; 1.56 ಕೋಟಿ ಟನ್‌

ಆಗಸ್ಟ್‌; 1.43 ಕೋಟಿ ಟನ್‌

ಸೆಪ್ಟೆಂಬರ್‌; 1.54 ಕೋಟಿ ಟನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT