ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಸೇವಾ ವಲಯದ ಬೆಳವಣಿಗೆ ಹೆಚ್ಚಳ

Last Updated 3 ಫೆಬ್ರುವರಿ 2021, 12:32 IST
ಅಕ್ಷರ ಗಾತ್ರ

ನವದೆಹಲಿ: ಆಂತರಿಕ ಮಾರುಕಟ್ಟೆಯಲ್ಲಿ ಬೇಡಿಕೆ ಸುಧಾರಿಸುತ್ತಿರುವುದರಿಂದ ದೇಶದ ಸೇವಾ ವಲಯವು ಸತತ ನಾಲ್ಕನೇ ತಿಂಗಳಿನಲ್ಲಿಯೂ ಚೇತರಿಕೆ ಹಾದಿಯಲ್ಲಿ ಸಾಗಿದೆ.

ಸೇವಾ ವಲಯದ ಚಟುವಟಿಕೆಗಳ ಸೂಚ್ಯಂಕವು ಡಿಸೆಂಬರ್‌ನಲ್ಲಿ 52.3ರಷ್ಟಿತ್ತು. ಇದು ಜನವರಿಯಲ್ಲಿ 52.8ಕ್ಕೆ ಏರಿಕೆಯಾಗಿದೆ.

ವಾಣಿಜ್ಯ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿರುವ ಜತೆಗೆ ವ್ಯಾಪಾರ ವಲಯದಲ್ಲಿನ ಆಶಾವಾದವೂ ಹೆಚ್ಚಾಗುತ್ತಿರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಹೇಳಿದೆ.

ಒಟ್ಟಾರೆ ಬೆಳವಣಿಗೆಯು ಜನವರಿಯಲ್ಲಿ ಏರಿಕೆ ಕಂಡಿದೆಯಾದರೂ ದೀರ್ಘಾವಧಿಯ ಸರಾಸರಿ ಬೆಳವಣಿಗೆ ದರ ಆಗಿರುವ 53.3ಕ್ಕಿಂತಲೂ ಕಡಿಮೆ ಇದೆ.

‘ಭಾರತೀಯ ಸೇವಾ ವಲಯವು ಜನವರಿಯಲ್ಲಿ ಉತ್ತಮ ಚಟುವಟಿಕೆ ಕಂಡಿದೆ. ಸತತ ನಾಲ್ಕನೇ ತಿಂಗಳಿನಲ್ಲಿ ಹೊಸ ವ್ಯಾಪಾರದಲ್ಲಿ ಏರಿಕೆ ಆಗುತ್ತಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ವೆಚ್ಚವು ಸತತ ಏಳನೇ ತಿಂಗಳಿನಲ್ಲಿಯೂ ಏರಿಕೆ ಆಗಿದೆ. ‘ಸೇವಾ ವಲಯದಲ್ಲಿ ವೆಚ್ಚ ಹೆಚ್ಚಾಗುತ್ತಿರುವುದು ಅತ್ಯಂತ ಕಳವಳಕಾರಿ ಅಂಶ’ ಎಂದು ಅವರು ತಿಳಿಸಿದ್ದಾರೆ.

ವೆಚ್ಚ ಹೆಚ್ಚುತ್ತಿರುವುದರಿಂದ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೇಮಕಾತಿಯು ಸತತ ಎರಡನೇ ತಿಂಗಳಿನಲ್ಲಿಯೂ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಯಾರಿಕೆ ಮತ್ತು ಸೇವಾ ವಲಯದ ಬೆಳವಣಿಗೆಗಳನ್ನು ಒಳಗೊಂಡ ಕಂಪೊಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಜನವರಿಯಲ್ಲಿ 54.9 ರಿಂದ 55.8ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT