ಆಹಾರ, ಸಾರಿಗೆ ಮತ್ತು ವೇತನಕ್ಕೆ ಸಂಬಂಧಿಸಿದಂತೆ ಮೇ ತಿಂಗಳಿನಲ್ಲಿ ಹೆಚ್ಚು ವೆಚ್ಚ ಮಾಡಬೇಕಾಗಿದೆ. ವೆಚ್ಚ ಹೆಚ್ಚಾಗುತ್ತಿರುವುದರಿಂದ ಖರೀದಿ ಸಾಮರ್ಥ್ಯ ತಗ್ಗುವ ಸಾಧ್ಯತೆ ಇದ್ದು, ಕೈಗೆಟಕುವ ಬೆಲೆಗೆ ಸೇವೆಗಳು ಲಭ್ಯವಾಗದೇ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಆಗಬಹುದು. ಕಂಪನಿಗಳು ತಮ್ಮ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮತ್ತು ಸವಾಲುಗಳನ್ನು ಎದುರಿಸಲು ಪರ್ಯಾಯ ಮೂಲಗಳ ಹುಡುಕಾಟ ನಡೆಸುತ್ತಿವೆ ಎಂದು ಎಸ್ ಆ್ಯಂಡ್ ಪಿಒ ಗ್ಲೋಬಲ್ ಮಾರ್ಕೆಟ್ ಇಂಟಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.