ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ ದೇಶದ ಉಕ್ಕು ರಫ್ತು

Published 25 ಫೆಬ್ರುವರಿ 2024, 14:48 IST
Last Updated 25 ಫೆಬ್ರುವರಿ 2024, 14:48 IST
ಅಕ್ಷರ ಗಾತ್ರ

ನವದೆಹಲಿ: 2024ರ ಜನವರಿಯಲ್ಲಿ ದೇಶದ ಉಕ್ಕು ರಫ್ತು 18 ತಿಂಗಳ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ ಎಂದು ಸ್ಟೀಲ್‌ಮಿಂಟ್‌ ತಿಳಿಸಿದೆ.

ಯುರೋಪಿಯನ್‌ ಒಕ್ಕೂಟದಿಂದ ಹೆಚ್ಚಿದ ಬೇಡಿಕೆ, ದೇಶದ ಉಕ್ಕಿನ ಸ್ಪರ್ಧಾತ್ಮಕ ಬೆಲೆಗಳು ರಫ್ತು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಸಂಶೋಧನಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

2023ರ ಜನವರಿಯಲ್ಲಿ 6.7 ಲಕ್ಷ ಟನ್‌ (0.67 ದಶಲಕ್ಷ ಟನ್‌) ರಫ್ತಾಗಿದ್ದರೆ, ಅದು ಈ ಬಾರಿ 11.10 ಲಕ್ಷ ಟನ್‌ಗೆ (1.11 ದಶಲಕ್ಷ ಟನ್‌) ಏರಿಕೆಯಾಗಿದೆ ಎಂದು ತಿಳಿಸಿದೆ.

ದೇಶದ ಮಾರುಕಟ್ಟೆಯಲ್ಲಿ ಪ್ರತಿ ಟನ್‌ ಹಾಟ್ ರೋಲ್ಡ್ ಕಾಯಿಲ್ (ಎಚ್‌ಆರ್‌ಸಿ) ಬೆಲೆ ₹54,300 ಇದ್ದರೆ, ಜಾಗತಿಕ ದರವು ₹58 ಸಾವಿರ ಇದೆ. ಈ ಅಂಶವು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉಕ್ಕಿನ ಬೇಡಿಕೆಯನ್ನು ಹೆಚ್ಚಾಗುವಂತೆ ಮಾಡಿತು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT