ಕರ್ನಾಟಕದಲ್ಲಿ 38 ಸಾವಿರ ಟನ್ ಇಳಿಕೆ
ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆಯು 38 ಸಾವಿರ ಟನ್‌ನಷ್ಟು ಕುಸಿದಿದೆ. ಕಳೆದ ವರ್ಷದ ಅಕ್ಟೋಬರ್–ನವೆಂಬರ್ ತಿಂಗಳಿನಲ್ಲಿ 8.12 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಅದು ಈ ಬಾರಿ 7.74 ಲಕ್ಷ ಟನ್‌ಗೆ ಇಳಿದಿದೆ.
ಕಬ್ಬಿನ ದರ ಹೆಚ್ಚಿಸುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದ ಹೊತ್ತಿನಲ್ಲಿ ಕಬ್ಬು ಅರೆಯುವಿಕೆ ವೇಗ ಪಡೆದುಕೊಂಡಿದೆ. ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಕಬ್ಬು ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದೆ.